Uncategorized

ಗಂಗಾ ಶುದ್ಧೀಕರಣ ಯೋಜನೆ ಕಾಮಗಾರಿಗೆ ರೂ.400 ಕೋಟಿ ಮಂಜೂರು

Pinterest LinkedIn Tumblr

ganga_reiver_photo

__ನವದೆಹಲಿ, ಆ. 2:  ಗಂಗಾನದಿ ಶುದ್ಧೀಕರಣಕ್ಕೆ ಸಂಬಂಧಿಸಿದ 400 ಕೋಟಿ ರೂ. ಅಂದಾಜಿನ ನಾನಾ ಕಾಮಗಾರಿಗಳಿಗೆ ರಾಷ್ಟ್ರೀಯ ಗಂಗಾನದಿ ತೀರ ಪ್ರಾಧಿಕಾರ ಮಂಜೂರಾತಿ ನೀಡಿದೆ.

ಮಂಜೂರಾತಿ ಪಡೆದಿರುವ ಕಾರ್ಯ ಯೋಜನೆಗಳಲ್ಲಿ ನದಿಯುದ್ಧಕ್ಕೂ ಇರುವ ಸ್ನಾನ ಘಟ್ಟಗಳ ಚಿತಾಗಾರಗಳ ಅಭಿವೃದ್ಧಿ ಕಲುಷಿತ ನೀರಿನ ಸೇರ್ಪಡೆ ತಡೆ ಕಾಮಗಾರಿಗಳು ಸೇರಿವೆ.

ಗಂಗಾನದಿ ನೀರು ಕಲುಷಿತಗೊಳ್ಳಲು ಕಾರಣವಾಗಿರುವ ನದಿ ತೀರದುದ್ದಕ್ಕೂ ಇರುವ ಚಿತಾಗಾರಗಳ ಮತ್ತು ಅಭಿವೃದ್ಧಿ ಕುರಿತಂತೆ ಸರಕಾರ ಈಗಾಗಲೇ ಯೋಜನೆ ರೂಪಿಸಿದ್ದು, ಉತ್ತರಾಖಂಡ್‌ನ ರುದ್ರಪ್ರಯಾಗ್ ಮತ್ತು ಗುಪ್ತರಾಶಿ, ಉತ್ತರ ಪ್ರದೇಶದ ಕಾನ್‌ಪುರ್ ಬಿಜನೂರ್, ಅಲಹಾಬಾದ್ ಮತ್ತು ಬತೂರ್, ಬಿಹಾರದ ಕಹಲ್‌ಗಾನ್, ಜಾರ್ಖಂಡ್‌ನ ಸಾಹಿಬ್‌ಗಂಜ್‌ಗಳಲ್ಲಿಯ ಸ್ನಾನ ಘಟ್ಟಗಳ ಅಭಿವೃದ್ಧಿ ಶೀಘ್ರದಲ್ಲಿ ಆರಂಭವಾಗುತ್ತಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನದಿನೀರು ಪರಿಸರ ವಿದ್ಯುತ್, ನಗರಾಭಿವೃದ್ಧಿ ಮತ್ತು ನದೀಪಾತ್ರದ 5 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಒಳಗೊಂಡ ಉನ್ನತ ಮಟ್ಟದ ಪರಿಶೀಲನಾ ಸಮಿತಿಯ ಹಸಿರು ನಿಶಾನೆಯೂ ಸಿಕ್ಕಿದೆ ಎಂದೂ ಪ್ರಾಧಿಕಾರ ಹೇಳಿದೆ.

Comments are closed.