Uncategorized

ಕಲಿಖೋ ಪುಲ್ ಅಧಿಕೃತ ನಿವಾಸ ಶಾಪಗ್ರಸ್ತವೆ? ಈ ಮನೆಯಲ್ಲೇ ಮೂವರು ಮಾಜಿ ಸಿಎಂಗಳ ಸಾವು!

Pinterest LinkedIn Tumblr

arunachala-9ಗುವಾಹತಿ: ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ ಅವರ ನಿಗೂಢ ಸಾವಿನ ನಂತರ ಅಲ್ಲಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸವೇ ಶಾಪಗ್ರಸ್ತವೆ? ಎಂಬ ಪ್ರಶ್ನೆ ಕಾಡುತ್ತಿದೆ.

ಕಲಿಖೋ ಪುಲ್ ಅವರು ಅರುಣಾಚಲ ಪ್ರದೇಶ ರಾಜಧಾನಿ ಇಟಾನಗರದ ನಿತಿ ವಿಹಾರ್ ಪ್ರದೇಶದಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲೇ ಸಾವಿಗೆ ಶರಣಾದ ಮೂರನೇ ವ್ಯಕ್ತಿಯಾಗಿದ್ದಾರೆ. ಇದಕ್ಕು ಮುನ್ನ ಇದೇ ಮನೆಯಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಂಡಿದ್ದಾರೆ. ಅಲ್ಲದೆ ಅಲ್ಲಿರುವಾಗಲೇ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.

2011ರಲ್ಲಿ ಮಾಜಿ ಮುಖ್ಯಮಂತ್ರಿ ದೊರ್ಜಿ ಖಂಡು ಅವರು ಮೊದಲ ಬಾರಿಗೆ ಎರಡು ಮಹಡಿಯ ಈ ನಿವಾಸವನ್ನು ಪ್ರವೇಶಿಸಿದ್ದರು. ಈ ಮನೆ ಪ್ರವೇಶಿಸಿದ ಕೆಲವೇ ತಿಂಗಳಲ್ಲಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು.

ಖಂಡು ಸಾವಿನ ನಂತರ 2011, ಮೇ ತಿಂಗಳಲ್ಲಿ ಕಣಿವೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಜರ್ಬಮ್ ಗ್ಯಾಮ್ಲಿನ್ ಅವರು ಈ ಮನೆ ಪ್ರವೇಶಿಸಿದರು. ಆದರೆ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ಅವರು ಸಹ ಅಧಿಕಾರ ಕಳೆದುಕೊಂಡರು. ಅಲ್ಲದೆ ಈ ಮನೆಯಲ್ಲಿರುವಾಗಲೇ 2014 ನವೆಂಬರ್ ತಿಂಗಳಲ್ಲಿ ತೀವ್ರ ಅನಾರೋಗ್ಯದಿಂದ ನಿಧನರಾದರು. ಹೀಗೆ ಈ ಮನೆ ಪ್ರವೇಶಿಸಿದ ಬಹುತೇಕ ಮುಖ್ಯಮಂತ್ರಿ ಅಧಿಕಾರ ಕಳೆದುಕೊಂಡಿದ್ದಾರೆ ಮತ್ತು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.

ಇನ್ನು ವಾಸ್ತು ತಜ್ಞರು ಸಹ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು ಎಂದು ಹಲವು ದಿನಗಳ ಹಿಂದೆಯೇ ಸಲಹೆ ನೀಡಿದ್ದಾರೆ. ಆದರೆ ಇದುವರೆಗೂ ಯಾವುದೇ ಬದಲಾವಣೆ ಮಾಡಿಲ್ಲ.

ಇಂದು ಬೆಳಗ್ಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಕಲಿಖೋ ಪುಲ್ ಅವರು ನಾಲ್ಕು ತಿಂಗಳ ಹಿಂದಷ್ಟೇ ಅಧಿಕಾರ ಕಳೆದುಕೊಂಡಿದ್ದು, ತಮ್ಮ ಅಧಿಕೃತ ಸರ್ಕಾರಿ ಬಂಗ್ಲೆಯನ್ನು ಇನ್ನಷ್ಟೇ ಖಾಲಿ ಮಾಡಬೇಕಿತ್ತು.

Comments are closed.