Uncategorized

ಬಿಜೆಪಿ ವಿಶೇಷ ವಾಟ್ಸಾಪ್ ಟೀಂ ಕಣಕ್ಕೆ

Pinterest LinkedIn Tumblr

ವೆಂಕಟ್ರಮಣ್.ಕೆ ಬೆಂಗಳೂರು

ಈ ಬಾರಿಯ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಜನಸಂಪರ್ಕ ಅಸ್ತ್ರ ಸಾಮಾಜಿಕ ಜಾಲತಾಣಗಳು. ಎಲ್ಲ ಪಕ್ಷಗಳು ಸಾಮಾಜಿಕ ಜಾಲತಾಣಗಳ ನಿರ್ವಹಣೆಗಾಗಿ ವಿಶೇಷ ತಂಡ ರಚಿಸಿದೆ. ಒಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿ ವಿಶೇಷ ವ್ಯಾಟ್ಸಾಪ್ ರಣಕಣಕ್ಕಿಳಿಸಿದೆ.

ಈಗಿನ ಚುನಾವಣಾ ಪ್ರಚಾರಗಳು ಸಾಮಾಜಿಕ ಜಾಲತಾಣಗಳ ಮೂಲಕವೇ ನಡೆಯುತ್ತಿದೆ. ಫೇಸ್ ಬುಕ್, ಟ್ವಿಟರ್, ಯೂಟ್ಯೂಬ್ ವ್ಯಾಟ್ಸಾಪ್ ಮೂಲಕ ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಕಾರ್ಯ ನಡೆಸುತ್ತಿವೆ. ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರತಿ ಅಭ್ಯರ್ಥಿ ಜನಸಂಪರ್ಕದಲ್ಲಿದ್ದು, ಆಗು-ಹೋಗು, ಸಾಧನೆಗಳು, ಯೋಜನೆಗಳ ಬಗ್ಗೆ ತಿಳಿ ಹೇಳುತ್ತಿದ್ದಾರೆ. ಆ ಮೂಲಕ ತಮ್ಮ ಪರವಾಗಿ ಜನಾಭಿಪ್ರಾಯ ಸೃಷ್ಟಿಸುವ ಪ್ರಯತ್ನದಲ್ಲಿದ್ದಾರೆ.

ಎಲ್ಲ ಪಕ್ಷಗಳು ಸಾಮಾಜಿಕ ಜಾಲತಾಣದ ಶಕ್ತಿ ಅರಿತಿದ್ದು, ಅದಕ್ಕಾಗಿಯೇ ವಿಶೇಷ ತಂಡ ರಚಿಸಿ, ಕಾರ್ಯನಿರ್ವಹಿಸುತ್ತಿದೆ. ಇತ್ತ ಬಿಜೆಪಿ ಸಾಮಾಜಿಕ ಜಾಲತಾಣಗಳ ಸದ್ಬಳಕೆಯಲ್ಲಿ ಮುಂಚೂಣಿಯಲ್ಲಿದ್ದು, ವಿಶೇಷ ವ್ಯಾಟ್ಸಾಪ್ ಟೀಂ ಕಣಕ್ಕಿಳಿಸಿದೆ.

ರಣಕಣದಲ್ಲಿ ವ್ಯಾಟ್ಸಾಪ್ ತಂಡ: ಸಾಮಾಜಿಕ ಜಾಲತಾಣಗಳ ಪೈಕಿ ವ್ಯಾಟ್ಸಾಪ್ ಪ್ರಬಲ ಅಸ್ತ್ರವಾಗಿದ್ದು, ಈ ಬಾರಿಯ ಚುನಾ ವಣೆಯಲ್ಲಿ ಜನರನ್ನು ನೇರವಾಗಿ ಸಂಪರ್ಕಿಸುವಲ್ಲಿ ನಿರ್ಣಾಯಕ ಮತ್ತು ಪರಿಣಾಮಕಾರಿ ಮಾಧ್ಯಮವಾಗಿದೆ. ಹೀಗಾಗಿ ಬಿಜೆಪಿ ವಿಶೇಷ ವ್ಯಾಟ್ಸಾಪ್ ಪಡೆಯನ್ನು ರಾಜ್ಯಾದ್ಯಂತ ಕಣಕ್ಕಿಳಿಸಿದೆ. ಸುಮಾರು 100 ಮಂದಿಯ ತಂಡ ರಾಜ್ಯದ 30 ಜಿಲ್ಲೆಗಳಲ್ಲಿ ಬೀಡು ಬಿಟ್ಟಿದ್ದು, ಗ್ರೂಪ್‌ಗಳನ್ನು ರಚಿಸಿ, ಬಿಜೆಪಿ ಅಭ್ಯರ್ಥಿಗಳು, ಮೋದಿ ಸರಕಾರದ ಸಾಧನೆ, ಬಿಜೆಪಿ ಅಧಿಕಾರವಧಿಯಲ್ಲಿನ ಯೋಜನೆ ಗಳನ್ನು ಹರಿಬಿಡಲು ಯೋಜಿಸಿದೆ.

ಪ್ರತಿ ಜಿಲ್ಲೆಗಳಲ್ಲಿ 2-3 ಮಂದಿ ಮೊಕ್ಕಾಂ ಹೂಡಿದ್ದು, ಕ್ಷೇತ್ರವಾರು ಮೂರು ನಾಲ್ಕು ಪ್ರತ್ಯೇಕ ವ್ಯಾಟ್ಸಾಪ್ ಗ್ರೂಪ್ ರಚಿಸಿ, ಬಿಜೆಪಿ ಪರ ಅಲೆ ಸೃಷ್ಟಿಸಲು ಮುಂದಾಗಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಸಕ್ರಿಯವಾಗಿ ವ್ಯಾಟ್ಸಾಪ್ ಗ್ರೂಪ್ ರಚಿಸಿ, ಪ್ರಚಾರ ಕಾರ್ಯ ನಡೆಸಲಾಗಿತ್ತು. ಅದೇ ತಂತ್ರಗಾರಿಕೆಯನ್ನು ಕರ್ನಾಟಕದಲ್ಲೂ ಮುಂದುವರಿಸಲು ಬಿಜೆಪಿ ಮುಂದಾಗಿದೆ. ಕಮಲ ಪಡೆ ಯಲ್ಲಿ ಉತ್ತರ ಭಾರತದ ಯುವಕರಿದ್ದು, ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಸೂರ್ಯ ರೋಷಿನಿ ಸಂಸ್ಥೆಯ ಮಾಲೀಕ ಆರ್‌ಎಸ್‌ಎಸ್ ಅನುಯಾಯಿಯಾಗಿರುವ ಬಿ.ಡಿ.ಅಗರವಾಲ್ ಸ್ವಯಂಪ್ರೇರಿತರಾಗಿ ಬಿಜೆಪಿ ಪರ ಪ್ರಚಾರ ಕಾರ್ಯನಡೆಸಲು 100 ಮಂದಿಯ ಈ ವ್ಯಾಟ್ಸಾಪ್ ಪಡೆಯನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ.

ಪ್ರತಿ ಕ್ಷೇತ್ರದಲ್ಲಿ 3-4 ವ್ಯಾಟ್ಸಾಪ್ ಗ್ರೂಪ್: ರಾಜ್ಯದ 30 ಜಿಲ್ಲೆಗಳಲ್ಲಿ ಬೀಡು ಬಿಟ್ಟಿರುವ ಈ ತಂಡ ಕ್ಷೇತ್ರವಾರು ಸುಮಾರು 3-4 ವ್ಯಾಟ್ಸಾಪ್ ಗ್ರೂಪ್ ರಚಿಸುವ ಗುರಿ ಹೊಂದಿದೆ. ಕಳೆದ ತಿಂಗಳಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ತಂಡ ಈಗಾಗಲೇ ಬಹುತೇಕ ಕ್ಷೇತ್ರಗಳಲ್ಲಿ ವ್ಯಾಟ್ಸಾಪ್ ಗ್ರೂಪ್ ರಚಿಸಿದೆ. ಕ್ಷೇತ್ರದ ಸ್ಥಳೀಯ ಕಾರ್ಯಕರ್ತರಿಗೆ ವ್ಯಾಟ್ಸಾಪ್ ಗ್ರೂಪ್ ರಚನೆ, ನಿರ್ವ ಹಣೆ ಕುರಿತು ತರಬೇತಿ ನೀಡುತ್ತಿದೆ. ಈ ವ್ಯಾಟ್ಸಾಪ್ ಗ್ರೂಪ್‌ಗಳಲ್ಲಿ ಬಿಜೆಪಿ ಸರಕಾರದ ಯೋಜನೆಗಳು, ಕೇಂದ್ರ ಸರಕಾರದ ಸಾಧನೆ, ಕಾಂಗ್ರೆಸ್ ಸರಕಾರದ ವೈಫಲ್ಯಗಳ ಬಗ್ಗೆ ಸಂದೇಶ, ವಿಡಿಯೋ ಹರಿಬಿಡಲಾಗುತ್ತದೆ. ಈಗಾಗಲೇ ಸುಮಾರು 200ಕ್ಕೂ ಹೆಚ್ಚು ವ್ಯಾಟ್ಸಾಪ್ ಗ್ರೂಪ್ ರಚಿಸಿರುವ ವಿಶೇಷ ತಂಡ, ಎಲ್ಲ 224 ಕ್ಷೇತ್ರಗಳಲ್ಲೂ ಪ್ರತ್ಯೇಕ ವ್ಯಾಟ್ಸಾಪ್ ಗ್ರೂಪ್ ರಚಿಸುವಲ್ಲಿ ಕಾರ್ಯ ನಿರತವಾಗಿದೆ.

ಬೂತ್ ಮಟ್ಟದಲ್ಲಿ ಗ್ರೂಪ್
ಮೊದಲಿಗೆ ಕ್ಷೇತ್ರವಾರು ವ್ಯಾಟ್ಸಾಪ್ ಗ್ರೂಪ್ ರಚಿಸುತ್ತಿರುವ ಈ ವಿಶೇಷ ತಂಡ ಬಳಿಕ ರಾಜ್ಯ ಬಿಜೆಪಿಯ ಸಾಮಾಜಿಕ ಮೀಡಿಯಾ ತಂಡದೊಂದಿಗೆ ಸೇರಿ ಪ್ರತಿ ಬೂತ್ ಮಟ್ಟದಲ್ಲಿ 7-8 ವ್ಯಾಟ್ಸಾಪ್ ಗ್ರೂಪ್ ರಚಿಸಲು ಯೋಜಿಸಲಾಗಿದೆ. ಆ ಮೂಲಕ ಬೂತ್ ವ ಡಿುಟ್ಟದಲ್ಲಿ ಜನ ಸಂಪರ್ಕ ಮಾಡುವುದು ರಾಜ್ಯ ಬಿಜೆಪಿ ಉದ್ದೇಶ. ಈ ವ್ಯಾಟ್ಸಾಪ್ ಗರಿಷ್ಠ ಸಂಖ್ಯೆಯ ಸಾರ್ವಜನಿಕರನ್ನು ಸೇರ್ಪ ಡೆಗೊಳಿಸುವ ಗುರಿಯನ್ನು ಹೊಂದಲಾಗಿದೆ.

Comments are closed.