Uncategorized

ಕೊರೋನಾ ವೈರಸ್​​: ದೇಶಾದ್ಯಂತ 67 ಬಿಎಸ್‌ಎಫ್ ಯೋಧರಿಗೆ ಸೋಂಕು

Pinterest LinkedIn Tumblr


ನವದೆಹಲಿ(ಮೇ.05): ವೈದ್ಯರು ಮತ್ತು ಪೊಲೀಸರ ಬನ್ನಲ್ಲೀಗ ಗಡಿ ಕಾಯುವ ಯೋಧರಿಗೂ ಕೊರೋನಾ ವೈರಸ್​​ ಬಿಸಿ ತಟ್ಟಿದೆ. ಇದುವರೆಗೂ ದೇಶಾದ್ಯಂತ 67 ಮಂದಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌(ಬಿಎಸ್​ಎಫ್​​) ಯೋಧರಿಗೆ ಸೋಂಕು ತಗುಲಿದೆ ಎಂದು ಸೇನೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಸದ್ಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನೀಡಿರುವ ಮಾಹಿತಿ ಪ್ರಕಾರ, ನಿನ್ನೆಯಷ್ಟೇ ತ್ರಿಪುರದಲ್ಲಿ 13 ಮಂದಿ ಯೋಧರಿಗೆ ಸೋಂಕು ಬಂದಿದೆ. ಈ ಪೈಕಿ 10 ಮಂದಿ ಬಿಎಸ್​ಎಫ್​​​ ಯೋಧರು ಸೇರಿದಂತೆ ಒಬ್ಬರ ಹೆಂಡತಿ ಮತ್ತು ಇಬ್ಬರು ಮಕ್ಕಳು ಕೂಡ ಇದ್ದಾರೆ. ಜತೆಗೆ ದೆಹಲಿಯಲ್ಲಿ 126ನೇ ಬಟಾಲಿಯನ್​​ಗೆ ಸೇರಿದ 25 ಯೋಧರಿಗೆ ಕೋವಿಡ್​​-19 ಪಾಸಿಟಿವ್​​ ಪತ್ತೆಯಾಗಿದೆ. ಈ ಮೂಲಕ ದೆಹಲಿಯೊಂದರಲ್ಲೇ 41 ಜನ ಯೋಧರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ದೇಶದಲ್ಲಿ ಕೊರೋನಾ ವೈರಸ್​​ಗೆ ಈಗಾಗಲೇ ಓರ್ವ ಸಿಆರ್​ಪಿಎಫ್​ ಯೋಧ ಬಲಿಯಾಗಿದ್ದಾರೆ. ದೇಶ ಕಾಯುವ ನೂರಾರು ಸೈನಿಕರಿಗೆ ಕೊರೋನಾ ಸೋಂಕು ತಗುಲಿದೆ. ಈ ಹಿಂದೆಯೇ ದೆಹಲಿ ಸಿಆರ್​ಪಿಎಫ್​ ಬೆಟಾಲಿಯನ್ ಒಂದರಲ್ಲೇ 122 ಯೋಧರಿಗೆ ಕೊರೋನಾ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ.

ದೆಹಲಿ ಬೆಟಾಲಿಯನ್​ನಲ್ಲಿ ಹೊಸದಾಗಿ 68 ಜನರಿಗೆ ಕೊರೋನಾ ಸೋಂಕು ಪತ್ತೆಯಾಗುವ ಮೂಲಕ ಈ ಬೆಟಾಲಿಯನ್​ನಲ್ಲಿ ಸೋಂಕಿತ ಯೋಧರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ. ಇನ್ನೂ 100ಕ್ಕೂ ಅಧಿಕ ಯೋಧರ ಪರೀಕ್ಷೆಯ ವರದಿ ಹೊರಬೀಳಬೇಕಿದೆ. ಕೆಲವು ದಿನಗಳ ಹಿಂದಷ್ಟೇ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ 55 ವರ್ಷದ ಸಿಆರ್​ಪಿಎಫ್​ ಯೋಧರೊಬ್ಬರು ಕೊರೋನಾದಿಂದ ಸಾವನ್ನಪ್ಪಿದ್ದರು.

Comments are closed.