Uncategorized

ಅವಹೇಳನಕಾರಿ ಪೋಸ್ಟ್ ಹಾಕಿರುವುದನ್ನು ಕಾನೂನಿನ ಚೌಕಟ್ಟಿನಲ್ಲಿ ವಿರೋಧಿಸಬೇಕೆ ಹೊರತು ಹಿಂಸಾಚಾರದಿಂದ ಏನೂ ಪ್ರಯೋಜನವಿಲ್ಲ: ಜಮೀರ್

Pinterest LinkedIn Tumblr

ಬೆಂಗಳೂರು: ನಗರದ ಕೆಜಿ ಹಳ್ಳಿ ಹಾಗೂ ಡಿಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೋಮು ಗಲಭೆಗೆ ಖೇದ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್, ಹಿಂಸಾಚಾರ ನಡೆದಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರ ಅಳಿಯ ಅವಹೇಳನಕಾರಿ ಪೋಸ್ಟ್ ಹಾಕಿರುವುದು ನಿಜಕ್ಕೂ ಖಂಡನೀಯ. ಆದರೆ ಇದನ್ನು ಕಾನೂನಿನ ಚೌಕಟ್ಟಿನಲ್ಲಿ ವಿರೋಧಿಸಬೇಕೆ ಹೊರತು ಹಿಂಸಾಚಾರದಿಂದ ಏನೂ ಪ್ರಯೋಜನವಿಲ್ಲ ಎಂದು ಜಮೀರ್ ಅಹ್ಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಗಲಭೆಗೆ ಕಾರಣರಾದವರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದಿರುವ ಜಮೀರ್ ಅಹ್ಮದ್ ಖಾನ್. ಜನರು ಆವೇಶಕ್ಕೆ ಒಳಗಾಗದೇ ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ಕಾನೂನಿಗೆ ಭಂಗ ಬರದಂತೆ ಶಾಂತಿಯುತ ಮಾರ್ಗದಲ್ಲಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿರುವ ಜಮೀರ್ ಅಹ್ಮದ್, ಕಾನೂನು ಕಾಪಾಡಲು ನಮ್ಮ ಪೊಲೀಸರು ಶಕ್ತರಾಗಿದ್ದಾರೆ ಎಂದು ನುಡಿದಿದ್ದಾರೆ.

‘ಪುಂಡಾಟಗಳನ್ನು ಸರ್ಕಾರ ಸಹಿಸಲ್ಲ, ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ‌ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ’ : ಸಿಎಂ ಬಿಎಸ್‌ವೈ

ಒಟ್ಟಿನಲ್ಲಿ ಕೆಜಿ ಹಳ್ಳಿ ಗಲಭೆಯನ್ನು ಖಂಡಿಸಿರುವ ಜಮೀರ್ ಅಹ್ಮದ್, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Comments are closed.