Uncategorized

“ಮಾರಕಾಸ್ತ್ರ” ಮೂಲಕ ಸಿನಿಮಾರಂಗಕ್ಕೆ ಪುನೀತ್‌ರನ್ನು ಹೋಲುವ ನಟನ ಎಂಟ್ರಿ

Pinterest LinkedIn Tumblr

ಮಂಗಳೂರು: “ನಿರೀಕ್ಷೆ ಹುಟ್ಟಿಸಿರುವ ಕನಸಿನ ರಾಣಿ ಮಾಲಾಶ್ರೀ ಅಭಿನಯದ “ಮಾರಕಾಸ್ತ್ರ” ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ” ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಹೋಲುವ ನಟರೊಬ್ಬರ ಎಂಟ್ರಿಯಾಗಿದೆ.

ಚಿತ್ರದಲ್ಲಿ ನಾಯಕ ನಟನಾಗಿ ಅಬಿನಯಿಸಿರುವ ನಟ ಆನಂದ್ ಆರ್ಯ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತೆ ಕಾಣುತ್ತಿದ್ದಾರೆ ಮಾತ್ರವಲ್ಲದೇ ಅವರ ನಟನೆಯ ಶೈಲಿಯಲ್ಲೇ ನಟಿಸಲು ಪ್ರಯತ್ನಿಸಿದ್ದಾರೆ ಎಂದು ನಟ ಹಾಗೂ ಹಿನ್ನೆಲೆ ಗಾಯಕ ಡಾ. ವಿ. ನಟರಾಜ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಚಿತ್ರಕ್ಕೆ ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿತ್ರೀಕರಣ ನಡೆದಿದ್ದು ಚಿತ್ರದಲ್ಲಿ ಐಟಂ ಸಾಂಗ್ ಸಹಿತ ನಾಲ್ಕು ಹಾಡುಗಳಿವೆ. ಒಂದು ಹಾಡನ್ನು ಮಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಅಕ್ಟೋಬರ್ 6ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು ಈಗಾಗಲೇ ಹಿಂದಿ ರೈಟ್ಸ್ 1.8 ಕೋಟಿ ರೂ.ಗೆ ಮಾರಾಟವಾಗಿದ್ದು ಸೆಟಲೈಟ್ ಹಕ್ಕು 1.25 ಕೋಟಿ ರೂ. ಗೆ ಆಫರ್ ಬಂದಿದೆ” ಎಂದು ತಿಳಿಸಿದರು.

ಚಿತ್ರದ ನಿರ್ದೇಶಕ ಗುರುಮೂರ್ತಿ ಸುನಾಮಿ ಮಾತನಾಡಿ, “ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವಿದೆ. ಇದು ನನ್ನ 10 ವರ್ಷಗಳ ಕನಸು. ಸಿನಿಮಾ ನೋಡಿ ಆಶೀರ್ವದಿಸಿ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಟ ಆನಂದ್ ಆರ್ಯ, ಕ್ರಿಯೇಟಿವ್ ಹೆಡ್ ಧನಕುಮಾರ್, ಮೈಕೋ ಆನಂದ್ ಮತ್ತಿತರರು ಉಪಸ್ಥಿತರಿದ್ದರು.

Comments are closed.