ಮಂಗಳೂರು ಫೆ. 19 : ಇಂದಿನ ಶಾಲಾ ಮಕ್ಕಳ ಮಾನಸಿಕ ಖಿನ್ನತೆಗೆ ಅತೀಯಾದ ಮೊಬೈಲ್
ದುರ್ಬಳಕೆ ಮತ್ತು ಮಾದಕ ದ್ರವ್ಯ ¸ ಸೇವನೆಯೇ ಮೂಲ ಕಾರಣ ಎಂದು ಖ್ಯಾತ ವೈದ್ಯ ಫ್ರೊ. ಡಾ|
ದೇವದಾಸ್ ರೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ನಗರದ ಕೂಳೂರು ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಅಮೃತ ನರ್ಸರಿ ಶಾಲೆಯಲ್ಲಿ ತಾ. 18/.02/.2024 ರಂದು ಜರಗಿದ ದಶಮಾನೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಪೋಷಕರನ್ನು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು ಈ ದುಶ್ಚಟದಿಂದ ಮುಕ್ತಗೊಳಿಸಲು ಪ್ರಾಮಾಣಿಕತೆಯಿಂದ ಶ್ರಮಿಸಬೇಕೆಂದು ಸಲಹೆ ನೀಡಿದರು.
ಮಂಗಳೂರು ನಗರ ಮಹಾನಗರ ಪಾಲಿಕೆಯ ಸದಸ್ಯ ಅನಿಲ್ ಕುಮಾರ್ ಗೌರವ ಅತಿಥಿಗಳಾಗಿ
ಪಾಲ್ಗೊಂಡು ವಿದ್ಯಾಮಂದಿರ ಎಲ್ಲರ ಜೀವನವನ್ನು ರೂಪಿಸುವ ಜ್ಞಾನದೇಗುಲವಾಗಿದ್ದು, ಶಿಕ್ಷಣ
ಪಡೆಯುವ ಮಕ್ಕಳಲ್ಲಿ ಭಾಷಾ ಬೇಧ, ಮತ ಭೇದವಿಲ್ಲದೆ ಉತ್ತಮ ಶಿಕ್ಷಣ, ಸಂಸ್ಕಾರ ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪಾಲ್ಗುಣಿ ಇಂಡಸ್ಟ್ರಿ ಮಾಲಕಿ ಶ್ರೀಮತಿ ಸರಸ್ವತಿ ಅವರು ಶಾಲಾ ಶಿಕ್ಷಕಿಯರ ನಿಸ್ವಾರ್ಥ, ಸೇವೆ ಮತ್ತು ಅಪೂರ್ವ ಸಾಧನೆಯನ್ನು ಅಭಿನಂದಿಸಿದರು.
ಅಮೃತ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವಪ್ನ ಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿ, ಶಾಲಾ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರ ಸಾಧನೆಯನ್ನು ಪರಿಗಣಿಸಿ ಗೌರವಿಸಲಾಯಿತು.
ಶಿಕ್ಷಕಿಯರಾದ ಶ್ರೀಮತಿ ಅನಿತಾ ಶಾಂತಕುಮಾರ್, ಶ್ರೀಮತಿ ಶಿಲ್ಜಾ ಶಶಿಕುಮಾರ್ ಅವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಗೀತಾ ಲಕ್ಷ್ಮಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಜರಗಿತು.
Comments are closed.