Uncategorized

ಒಗ್ಗಟ್ಟಿನ ಮಂತ್ರದೊಂದಿಗೆ ಕ್ಷಾತ್ರ ಸಂಗಮ ನಿರಂತರವಾಗಿ ನಡೆಯಲಿ : ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್

Pinterest LinkedIn Tumblr

ಮಂಗಳೂರು : “ಕ್ಷಾತ್ರ ಸಂಗಮ-3” ಕಾರ್ಯ ಕ್ರಮ ಕ್ಷತ್ರಿಯ ಸಂಗಮದ ಹೆಗ್ಗುರುತು. ಹಿಂದಿನ ಕಾಲದಲ್ಲಿ ನಾಲ್ಕು ಪಂಡಗಳಿದ್ದೂ ಇವತ್ತೂ ನೂರಾರು ಪಂಗಡಗಳಾಗಿವೆ.ರಾಜ್ಯದಲ್ಲಿ 39 ಪಂಗಡ ಗಳಿವೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಒಗ್ಗೂಡಬೇಕು,ಇದು ಇಲ್ಲಿಗೆ ಮಾತ್ರ ನಿಲ್ಲದೆ ಪ್ರತಿ ಜಿಲ್ಲೆಯಲ್ಲಿ ಕ್ಷಾತ್ರ ಸಂಗಮ ನಡೆಸಿ ಒಗ್ಗೂಡಿಸಬೇಕು ಎಂದು ಮಾಜಿ ಸಚಿವ ಕೃಷ್ಣ ಪಾಲೆಮಾರ್ ಹೇಳಿದರು.

ಅವರು ರಾಮಕ್ಷತ್ರಿಯ ಸೇವಾ ಸಂಘ(ರಿ) ಮಂಗಳೂರು ಇದರ ನೇತೃತ್ವದಲ್ಲಿ ಮೋರ್ಗನ್ಸ್‌ ಗೇಟ್‌ನಲ್ಲಿರುವ ಪಾಲೆಮಾರ್ ಗಾರ್ಡನ್ ನಲ್ಲಿ ಹಮ್ಮಿಕೊಂಡಿರುವ “ಕ್ಷಾತ್ರ ಸಂಗಮ-3” ರಾಮಕ್ಷತ್ರಿಯರ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ನಮ್ಮ ನಿಷ್ಠಾವಂತ ಸಮಾಜದಲ್ಲಿ ಪೋಲಿಸ್ ಇಲಾಖೆಯ ಇದ್ದು ಎಲ್ಲಾ ನಾಯಕರು ಮುಂದೆ ಬರಬೇಕು,ಹುಟ್ಟಿದ ಮೇಲೆ ಸಮಾಜಕ್ಕೆ ಕೊಡುಗೆ ಕೊಡಬೇಕು, ದೇಶಭಕ್ತಿ,ದೈವ ಭಕ್ತಿಯನ್ನು ನೀಡಬೇಕು, ಮುಂದಿನ ದಿನಕ್ಕೆ ಒಗ್ಗಟ್ಟಿನ ಮಂತ್ರದೊಂದಿಗೆ ಈ ಕ್ಷಾತ್ರ ಸಂಗಮ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ವಾಗ್ಮಿ ಶ್ರೀಕಾಂತ್ ಶೆಟ್ಟಿಯವರು ಮಾತನಾಡಿ, ಕ್ಷಾತ್ರ ಸಂಗಮದ ಹೆಸರು ಕಂಡು ರೋಮಾಂಚನಗೊಂಡು ಈ ಕಾರ್ಯಕ್ರಮಕ್ಕೆ ಬಂದೆ. ಸಮಾಜದ ರಕ್ಷಣೆಗೆ ನಿಲ್ಲತ್ತಾನೋ ಅವನು ಕ್ಷತ್ರಿಯ.ಇತಿಹಾಸದ ಪ್ರಕಾರ ಉಳ್ಳಾಲದ ರಾಣಿ ಅಬ್ಬಕ್ಕ ರಾಣಿಯ ಪರಾಕ್ರಮದಿಂದ ಪೊರ್ಚುಗೀಸರನ್ನು ಒದ್ದು ಓಡಿಸಿದ್ದಾರೆ. ಅಂತೇಯೆ ಬೇಕಲ್ ಕೊಟೆಯ ತಿಮ್ಮ ನಾಯಕನ ಕಥೆಯ ಬಗ್ಗೆ ವಿವರಿಸಿದರು. ಬ್ರಿಟಿಷರು ರಾಮಕ್ಷತ್ರಿಯನ್ನು ಹಂಗಿಸಿದ್ದರು ಯುದ್ದದಲ್ಲಿ ಬ್ರಿಟಿಷರು ಗೆದ್ದರು. ಬೇಕಲ ತಿಮ್ಮ ನಾಯಕನನ್ನು ಫಿರಂಗಿ ಬಾಯಿಗೆ ಕಟ್ಟಿದ್ದು ಈ ಬ್ರಿಟಿಷರು ತಿಮ್ಮ ನಾಯಕನ್ನು ಉಡಾಯಿಸಿ ದೇಹವನ್ನು ಚಿದ್ರ ಚಿದ್ರ ಮಾಡಿ ಕೊಂದುಹಾಕಿದರು. ದೇಶಕ್ಕಾಗಿ ಪ್ರಾಣತ್ಯಾಗಮಾಡಿದ ತಿಮ್ಮ ನಾಯಕನ್ನು ಈ ಕ್ಷತ್ರಿಯ ಸಮಾಜ ಸ್ಮರಿಸಬೇಕು ಎಂದರು.

ರಾಮ – ಕ್ಷತ್ರಿಯ ಪರಾಕ್ರಮದ ಸಂಗಮ ಎಂದು ಹೇಳಿದರು ಅಲ್ಲಲ್ಲಿ ಕೋಟೆಯನ್ನು ಕಟ್ಟಿದ ನಂಬಿಕಸ್ತ ಸಮಾಜದ ಇತಿಹಾಸದ ಬಗ್ಗೆ ತಿಳಿಸಿದರು. ಬಿಕ್ಷು ಲಕ್ಷಣಾನಂದ ಸ್ವಾಮೀಜಿಯನ್ನು ಸ್ಮರಿಸಿದರು ಅಂದು ಮಣ್ಣಿನಲ್ಲಿ ನಡೆದ ಸಸಿ ಇಂದು ಮರವಾಗಿ ಬೆಳೆದಿದೆ ,ಕ್ಷತ್ರಿಯತ್ವ ಅಂದರೆ ಜಾತಿ ಅಲ್ಲ ಅದು ಮನೋಸ್ಥಿತಿ ಎಂದರು.

ಔರಂಗಜೇಬನ ಧಾಳಿಯ ಸಂದರ್ಭದಲ್ಲಿ ಗಾಟಿಯಲ್ಲೆ ತಡೆಯುವಂತಹ ಕೆಲಸ ಮಾಡಿದ್ದು ಈ ಕ್ಷತ್ರಿಯ ಸಮಾಜ. ಚಿತ್ತಾರ ಗಡ ಮೇವಾಡದ ಹೋರಾಟದ ಬಗ್ಗೆ ಹೇಳಿದ ಅವರು ಸಮಾಜವನ್ನು ಉಳಿಸುವ ನಿಟ್ಟಿನಲ್ಲಿ ಹೆಂಡತಿ ತನ್ನ ಕತ್ತನ್ನು ಕತ್ತರಿಸಿ ಕೊಟ್ಟ ಘಟನೆ ಕ್ಷತ್ರಿಯ ಸಮಾಜದ ಮಹಿಳೆಯಿಂದ ನಡೆದದ್ದು ಇತಿಹಾಸ. ಆದರಿಂದ ಕ್ಷತ್ರಿಯ ಸಮಾಜ ಮುಂಚೂಣಿಯಲ್ಲಿ ನಿಂತು ಸವಿಂಧಾನ ಉಳಿವಿಗಾಗಿ ಸಮಾಜ ಹೋರಾಟ ಮಾಡೋಣ ಎಂದು ಹೇಳಿದರು.

ಜೆ.ಕೆ ರಾವ್ ರವರು ಸ್ವಾಗತಿಸಿದರು. ಯೋಗೀಶ್ ಕುಮಾರ್ ಜೆಪ್ಪುರವರು ಪ್ರಸ್ತಾವಿಕ ಭಾಷಣ ಮಾಡಿದರು.

ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ರಾಮಕ್ಷತ್ರಿಯ ಸೇವಾ ಸಂಘ(ರಿ) ಇದರ ಅಧ್ಯಕ್ಷ ್ರಾದ ಸಿ.ಚ್ ಮುರಳಿಧರ್, ವಿನೋದ್ ಕುಮಾರ್, ಅನಂತ ಪದ್ಮನಾಭ, ಸಂದೀಪ್ ಜೆ, ರಾಘವೇಂದ್ರ ರಾವ್, ರಾಮಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಸುರೇಶ್ ರಾವ್, ದಿನೇಶ್, ಸಂಘದ ಅಂತರಿಕ ಲೆಕ್ಕಪರಿಶೋಧಕ ಶಿವಪ್ರಸಾದ್ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.