ಕರ್ನಾಟಕ

ಪ್ರಣಯರಾಜ ನಟ ಶ್ರೀನಾಥ್‌ರೊಂದಿಗೆ ದುಬೈಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Pinterest LinkedIn Tumblr

Kannadigaru dubai-Nov 16_2014_166

ಫೋಟೋ: ಅಶೋಕ್ ಬೆಳ್ಮಣ್

ದುಬೈ, ನ.16: ದುಬೈ ಕನ್ನಡಿಗ ಬಳಗದವರು ಶುಕ್ರವಾರದಂದು ದುಬೈ ಶೇಖ್ ಝಾಯಿದ್ ರಸ್ತೆಯ ಜೇಮ್ಸ್ ವೆಲ್ಲಿಂಗ್ಟನ್ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ 59ನೆ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಸಿನಿಮಾದ ಪ್ರಣಯರಾಜನೆಂದೇ ಖ್ಯಾತರಾದ ನಟ ಶ್ರೀನಾಥ್ ಭಾಗವಹಿಸಿದ್ದು, ತಮ್ಮ ಸಿನಿಮಾ ಪಯಣದ ಬಗ್ಗೆಗಿನ ನೆನಪನ್ನು ಮೆಲುಕು ಹಾಕಿದರು.

ನನಗೆ ವಯಸ್ಸಾಗಿದ್ದರೂ ನನ್ನ ನಟನೆಗೆ ವಯಸ್ಸಾಗಿಲ್ಲ. ನಾನು ಇನ್ನೂ ಚಿರಯುವಕನಂತೆಯೇ ಇದ್ದೇನೆ ಎಂಬ ಭಾವನೆ ನನ್ನಲ್ಲಿದೆ. ಸಿನಿಮಾ ಜಗತ್ತು ಇಂದು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದರೆ ಅದಕ್ಕೆ ಕಾರಣ ಕನ್ನಡಿಗರು. ಕನ್ನಡಿಗರ ಋಣ ನಾನು ಎಂದಿಗೂ ಮರೆಯಲ್ಲ. ಇನ್ನು ಮುಂದೆಯೂ ಸಿನಿಮಾದಲ್ಲಿ ನಟಿಸುವ ಮೂಲಕ ನನ್ನ ಜೀವನನ್ನು ಸಾರ್ಥಕಗೊಳಿಸುತ್ತೇನೆ ಎಂದು ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದರು.

Kannadigaru dubai-Nov 16_2014_035

Kannadigaru dubai-Nov 16_2014_054

Kannadigaru dubai-Nov 16_2014_093

Kannadigaru dubai-Nov 16_2014_104

Kannadigaru dubai-Nov 16_2014_163

Kannadigaru dubai-Nov 16_2014_164

Kannadigaru dubai-Nov 16_2014_165

Kannadigaru dubai-Nov 16_2014_167

Kannadigaru dubai-Nov 16_2014_168

Kannadigaru dubai-Nov 16_2014_171

Kannadigaru dubai-Nov 16_2014_172

Kannadigaru dubai-Nov 16_2014_173

Kannadigaru dubai-Nov 16_2014_174

Kannadigaru dubai-Nov 16_2014_175

Kannadigaru dubai-Nov 16_2014_176

Kannadigaru dubai-Nov 16_2014_177

ಗಣ್ಯರೆಲ್ಲರೊಂದಿಗೆ ಸೇರಿಕೊಂಡು ಶ್ರೀನಾಥ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದ ಆರಂಭದಲ್ಲಿ ಚೆಂಡೆ-ತಾಳಗಳ ಮೂಲಕ ಶ್ರೀನಾಥ್‌ರವರನ್ನು ವೇದಿಕೆಗೆ ಅದ್ದೂರಿ ಮೆರವಣಿಗೆಯ ಮೂಲಕ ಕರೆತರಲಾಯಿತು.

ಚಿಲ್ಲಿವಿಲ್ಲಿ ಕಂಪೆನಿಯ ಸತೀಶ್ ವೆಂಕಟರಮಣ, ಎಂಕ್ವೇರ್ ಕಂಪೆನಿ ಮುಸ್ತಫಾ, ಕನ್ನಡಿಗರು ದುಬೈಯ  ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಸಂಘಟಕರಾದ ಉಮಾ ವಿಧ್ಯಾದರ್, ಸಾದನ್ ದಾಸ್, ಬಸವರಾಜ್ ಸಾಲಿಮಠ್, ವೀರೇಂದ್ರ ಬಾಬು, ಡಾ. ಮೋಹನ್ ಕುದೂರು, ಶಿವಕುಮಾರ್, ನಟರಾಜನ್ ಹಾಗೂ ಎಂ.ಟಿ.ಆರ್ ರೆಸ್ಟೋರೆಂಟ್ ಗಾಯತ್ರಿ ಅಮಿತ್ ಉದ್ಘಾಟನೆಯ ವೇಳೆ ವೇದಿಕೆಯಲ್ಲಿದ್ದರು.

Kannadigaru dubai-Nov 16_2014_001

Kannadigaru dubai-Nov 16_2014_003

Kannadigaru dubai-Nov 16_2014_006

Kannadigaru dubai-Nov 16_2014_007

Kannadigaru dubai-Nov 16_2014_010

Kannadigaru dubai-Nov 16_2014_011

Kannadigaru dubai-Nov 16_2014_013

Kannadigaru dubai-Nov 16_2014_014

Kannadigaru dubai-Nov 16_2014_020

Kannadigaru dubai-Nov 16_2014_021

Kannadigaru dubai-Nov 16_2014_022

Kannadigaru dubai-Nov 16_2014_023

Kannadigaru dubai-Nov 16_2014_024

Kannadigaru dubai-Nov 16_2014_026

Kannadigaru dubai-Nov 16_2014_027

Kannadigaru dubai-Nov 16_2014_028

Kannadigaru dubai-Nov 16_2014_029

Kannadigaru dubai-Nov 16_2014_030

Kannadigaru dubai-Nov 16_2014_031

Kannadigaru dubai-Nov 16_2014_032

Kannadigaru dubai-Nov 16_2014_033

Kannadigaru dubai-Nov 16_2014_034

ಪಂಡಿತ್ ಮಾರುತಿ ರಾವ್ ಇನಾಂದಾರ್ರ ಶಿಷ್ಯೆ ವಿದುಷಿ ಕಲ್ಪನಾ ಸುಮಂತ್ರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ -ಸುಗಮ ಸಂಗೀತ ಕಛೇರಿ ನಡೆಯಿತು. ಪಂಡಿತ್ ಹರಿಪ್ರಸಾದ್ ಚೌರಾಸಿಯಾರ ಶಿಷ್ಯರಾದ ಪಂಡಿತ್ ಹಿಮಾನ್ಷುನಂದರವರ ಮಧುರವಾದ ಕೊಳಲು ವಾದನ ನೆರೆದವರನ್ನು ರೋಮಾಂಚನಗೊಳಿಸಿತು. ಇವರಿಗೆ ಕೀಬೋಡ್‌ನಲ್ಲಿ ಮಂಗಳಾಂಬ, ತಬಲ ಗುರು ಮೂರ್ತಿಯವರು ಬಾರಿಸಿ ಸಾಥ್ ನೀಡಿದರು.

‘ಯಾವ ಮೋಹನ ಮುರಳಿ ಕರೆಯಿತೋ’ ಹಾಗೂ ಸಂತ ಶಿಶುನಾಳ ಶರೀಫರ ‘ಕೋಡಗನ ಕೋಳಿ ನುಂಗಿತ್ತಾ ನೋಡವ್ವಾ ತಂಗಿ’ ಹಾಡಿಗೆ ಚಪ್ಪಾಳೆಯ ಮೂಲಕ ಸಂಗೀತ ರಸಿಕರು ತಮ್ಮ ಪ್ರೋತ್ಸಾಹವನ್ನು ವ್ಯಕ್ತಪಡಿಸಿದರು.

Kannadigaru dubai-Nov 16_2014_036

Kannadigaru dubai-Nov 16_2014_037

Kannadigaru dubai-Nov 16_2014_038

Kannadigaru dubai-Nov 16_2014_039

Kannadigaru dubai-Nov 16_2014_040

Kannadigaru dubai-Nov 16_2014_041

Kannadigaru dubai-Nov 16_2014_042

Kannadigaru dubai-Nov 16_2014_043

Kannadigaru dubai-Nov 16_2014_044

Kannadigaru dubai-Nov 16_2014_046

Kannadigaru dubai-Nov 16_2014_048

Kannadigaru dubai-Nov 16_2014_050

Kannadigaru dubai-Nov 16_2014_051

Kannadigaru dubai-Nov 16_2014_052

Kannadigaru dubai-Nov 16_2014_053

Kannadigaru dubai-Nov 16_2014_056

Kannadigaru dubai-Nov 16_2014_059

Kannadigaru dubai-Nov 16_2014_060

Kannadigaru dubai-Nov 16_2014_061

Kannadigaru dubai-Nov 16_2014_062

Kannadigaru dubai-Nov 16_2014_063

ಕುಮಾರಿ ಪ್ರಜ್ಞಾ ವಸುಪಾಲ್ಳ ಸ್ವಾಗತ ನೃತ್ಯದಿಂದ ಆರಂಭಗೊಂಡು, ಕುಮಾರಿ ಮಾನ್ಯ ಸತೀಶ್ ‘ಕೃಷ್ಣಾ ನೀ ಬೇಗನೆ ಬಾರೊ’, ಸುಗ್ಗಿ ಕುಣಿತ ಹೀಗೆ ವಿವಿಧ ತಂಡಗಳಿಂದ ನಡೆದ ಮನಮೋಹಕ ನೃತ್ಯ ಪ್ರಕಾರಗಳು ನೆರೆದವರನ್ನು ಉಲ್ಲಾಸಭರಿತರನ್ನಾಗಿಸಿತು. ಬಳಿಕ ಶಿವಕುಮಾರ್, ಉದಯ್ ನಂಜಪ್ಪ, ದೀಪ ಜೊತೆಯಾಗಿ ಚಿತ್ರನಟ ಡಾ.ಶ್ರೀನಾಥ್ ಅಭಿನಯಿಸಿದ ಹಳೆಯ ಚಿತ್ರ ಗೀತೆಗಳನ್ನು ಹಾಡಿದರು. ಈ ವೇಳೆ ಡಾ.ಶ್ರೀನಾಥ್ ಹೆಜ್ಜೆ ಹಾಕಿದಾಗ ಕೆಲ ಸಭಿಕರು ವೇದಿಕೆ ಮೇಲೆ ಬಂದು ಅವರ ಜೊತೆ ಹೆಜ್ಜೆ ಹಾಕಿ ಕುಣಿದರು.

ಇದೇ ವೇಳೆ ನಟ ಡಾ.ಶ್ರೀನಾಥ್‌ರನ್ನು ಸನ್ಮಾನಿಸಲಾಯಿತು. ಖ್ಯಾತ ಹಾಸ್ಯಗಾರ್ತಿ ಸುಧಾ ಬರಗೂರು ತಮ್ಮ ಹಾಸ್ಯಭರಿತ ಮಾತುಗಳನ್ನು ಸಮಾರಂಭದ ಮುಂದಿಟ್ಟು ನೆರೆದವರಿಗೆ ಇನ್ನಷ್ಟು ಮನರಂಜನೆಯನ್ನು ನೀಡಿದರು.

Kannadigaru dubai-Nov 16_2014_064

Kannadigaru dubai-Nov 16_2014_065

Kannadigaru dubai-Nov 16_2014_066

Kannadigaru dubai-Nov 16_2014_067

Kannadigaru dubai-Nov 16_2014_068

Kannadigaru dubai-Nov 16_2014_069

Kannadigaru dubai-Nov 16_2014_070

Kannadigaru dubai-Nov 16_2014_071

Kannadigaru dubai-Nov 16_2014_072

Kannadigaru dubai-Nov 16_2014_073

Kannadigaru dubai-Nov 16_2014_074

Kannadigaru dubai-Nov 16_2014_075

Kannadigaru dubai-Nov 16_2014_076

Kannadigaru dubai-Nov 16_2014_077

Kannadigaru dubai-Nov 16_2014_078

Kannadigaru dubai-Nov 16_2014_079

Kannadigaru dubai-Nov 16_2014_080

Kannadigaru dubai-Nov 16_2014_081

Kannadigaru dubai-Nov 16_2014_082

Kannadigaru dubai-Nov 16_2014_083

ಕಾರ್ಯಕ್ರಮದಲ್ಲಿ ದುಬೈಯ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಪ್ರಕಾಶ್ ಪಯ್ಯರ್, ಗಣೇಶ್ ರೈ, ಕರ್ನೂರು ಮೋಹನ್ ರೈ, ಶಾರ್ಜಾ ಕರ್ನಾಟಕ ಸಂಘದ ಪದಾಧಿಕಾರಿಗಳು, ರೇಡಿಯೋ ಸ್ಪೈಸ್ ಹರ್ಮನ್ ಲೂಯಿಸ್, ಅರುಣ್ ಮುತ್ತುಗದುರ್, ಹೀರಣ್ಣ ಮುಲಿಮನಿ, ರಿಯಾಲಿಟಿ ಇಂಡಿಯಾ ಯೆಕ್ಷ್ಪೊ ಝಿಯ ಸೇಠ್ ಸಹಿತ ಹಲವರು ಪ್ರಮುಖರು ಹಾಜರಿದ್ದರು.

Write A Comment