ಕರ್ನಾಟಕ

ನಾಲಿಗೆ ಕೊಯ್ದುಕೊಂಡು ಹರಕೆ ತೀರಿಸಲು ಯತ್ನ; ಆನಂದ್‌ಸಿಂಗ್ ಬಿಡುಗಡೆಗೆ ಹುಲಿಗೆಮ್ಮ ದೇವಿಗೆ ಮೊರೆ ಹೋಗಿದ್ದ ಅಭಿಮಾನಿ

Pinterest LinkedIn Tumblr

pvec26jan15jhpt5ep

ಹೊಸಪೇಟೆ (ಬಳ್ಳಾರಿ ಜಿಲ್ಲೆ):  ಬೇಲೆಕೇರಿ ಅಕ್ರಮ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧಿತ­ರಾಗಿದ್ದ ವಿಜಯ­ನಗರ ಕ್ಷೇತ್ರದ ಶಾಸಕ ಆನಂದ್‌ಸಿಂಗ್‌ ಬಿಡುಗಡೆಯಾಗಿ­ದ್ದ­ರಿಂದ ನಾಲಿಗೆ ಕೊಯ್ದುಕೊಂಡು ಹರಕೆ ತೀರಿಸಲು ಮುಂದಾಗಿದ್ದ ಅಭಿಮಾನಿ­ಯನ್ನು  ಅವರ ಮನೆಯವರು ತಡೆದ ಘಟನೆ ನಗರದ ಹೊರ ವಲಯದ ಕಾರಿಗನೂರು ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.

ಆನಂದ್‌ಸಿಂಗ್‌ ಬಿಡುಗಡೆಯಾದರೆ ನಾಲಿಗೆ ಕೊಯ್ದು ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಿಗೆ ನೈವೇದ್ಯ ನೀಡುವು­ದಾಗಿ ಮುರುಳೀಧರ್‌ ಎಂಬುವವರು ಹರಕೆ ಹೊತ್ತಿದ್ದರು. ಅದರಂತೆ ಕೊಪ್ಪಳ ಜಿಲ್ಲೆಯ ಹುಲಿಗಿಗೆ ಶನಿವಾರ ಹೊರಟ್ಟಿದ್ದರು.

ಆದರೆ, ಅವರ ಅತಿರೇಕಕ್ಕೆ ಕಡಿವಾಣ ಹಾಕಿದ ಮನೆಯವರು  ಮನೆ­ಯ­ಲ್ಲಿಯೇ ಉಳಿಸಿಕೊಂಡಿದ್ದಾರೆ. ಆದರೆ, ರಾತ್ರಿ ಮನೆಯ ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ತೆರಳಿ ನಾಲಿಗೆಯನ್ನು ಚಾಕುವಿನಿಂದ ಕೊಯ್ದುಕೊಳ್ಳಲು ಮುಂದಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಪತ್ನಿ ಶಾರದಾ ಸೇರಿದಂತೆ ಇತರರು  ಚಾಕು­ವನ್ನು ಕಿತ್ತುಕೊಂಡಿದ್ದಾರೆ. ನಾಲಿಗೆ­ಯನ್ನು ಕೊಯ್ದುಕೊಳ್ಳಲು ಯತ್ನಿಸಿದ್ದರಿಂದ ಗಾಯವಾಗಿ ಬಾಯಿ ರಕ್ತಸಿಕ್ತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

‘ಮುರಳೀಧರ್‌ ಆರೋಗ್ಯ ಸ್ಥಿರವಾಗಿ­ರುವುದಾಗಿ ವೈದ್ಯರು ತಿಳಿಸಿದ್ದಾರೆ. ನಾಲಿಗೆಗೆ ಚಿಕಿತ್ಸೆಯೊಂದಿಗೆ ಅವರಿಗೆ ಮನೋವೈದ್ಯರಿಂದ ಸಮಾಲೋಚನೆ ನಡೆಸುವ ಅಗತ್ಯವಿದೆ’ ಎಂದು ಶಾಸಕ ಆನಂದ್‌ ಸಿಂಗ್‌ಪ್ರತಿಕ್ರಿಯಿಸಿದ್ದಾರೆ.

‘ಒಬ್ಬ ನಾಯಕನ ಮೇಲೆ ಅಭಿಮಾನ ಇರಬೇಕು. ಆದರೆ ಅಂಧಾಭಿಮಾನ ಇರ­ಬಾರದು. ಇಂಥ ಅತಿರೇಕಕ್ಕೆ ಯಾರೂ ಮುಂದಾಗಬಾರದು’ ಎಂದು ಅವರು ಮನವಿ ಮಾಡಿದರು.

Write A Comment