ಕನ್ನಡ ವಾರ್ತೆಗಳು

ಬೈಕ್ ಗೆ ಟ್ರಕ್ ಢಿಕ್ಕಿ ಬೈಕ್ ಸವಾರ ಸಾವು.

Pinterest LinkedIn Tumblr

abshetty_bike_accdent_m

ಮಂಗಳೂರು,ಫೆ.16 : ನಗರದ ಎ ಬಿ ಶೆಟ್ಟಿ ಸರ್ಕಲ್ ಬಳಿ ಸೋಮವಾರ ಮುಂಜಾನೆ ಬೈಕ್ ಗೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ ಮೃತಪಟ್ಟ ವ್ಯಕ್ತಿ ಸುರತ್ಕಲ್ ಕೃಷ್ಣಾಪುರ ನಿವಾಸಿ ಮಹಮ್ಮದ್ ಉಮರ್ ಫಾರುಕ್ (26) ಎಂದು ಗುರುತಿಸಲಾಗಿದೆ.

abshetty_bike_accdent_6a

abshetty_bike_accdent_8

abshetty_bike_accdent_2 abshetty_bike_accdent_3 abshetty_bike_accdent_4 abshetty_bike_accdent_5 abshetty_bike_accdent_7

 ಉಮರ್ ಫಾರೂಕ್ ಹಂಪನಕಟ್ಟೆಯಿಂದ ಎ.ಬಿ.ಶೆಟ್ಟಿ ವೃತ್ತದ ಬಳಿ ಬರುತ್ತಿದ್ದ ಸಂದರ್ಭ ದಲ್ಲಿ ಬಂದರ್ ಕಡೆಯಿಂದ ಬಂದ ಟ್ಯಾಂಕರ್, ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ವಾಹನದೊಂದಿಗೆ ರಸ್ತೆಗೆ ಅಪ್ಪಳಿಸಿದ ಉಮರ್ ಫಾರೂಕ್‌ರ ಮೇಲೆ ಟ್ರಕ್ ಚಲಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು.  ಇ ಕಾರ್ಟ್  ಕೊರಿಯರ್ ಸಂಸ್ಥೆಯ ಉದ್ಯೋಗಿ : ಉಮರ್ ಫಾರೂಕ್ ಮಂಗಳೂರಿನ ಕೊರಿಯರ್ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದು, ನಿತ್ಯ ಕೃಷ್ಣಾಪುರದಿಂದ ಮಂಗಳೂರಿಗೆ ಬರುತ್ತಿದ್ದರೆನ್ನಲಾಗಿದೆ. ಸೋಮವಾರ ಮಧ್ಯಾಹ್ನ ಸಂಸ್ಥೆಯ ಕೆಲಸದ ನಿಮಿತ್ತ ಹಂಪನಕಟ್ಟದಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸ ಲಾಯಿತು. ಈ ಬಗ್ಗೆ ಕದ್ರಿ ಪೊಲೀಸ್ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment