ಮಂಗಳೂರು,ಫೆ.16 : ನಗರದ ಎ ಬಿ ಶೆಟ್ಟಿ ಸರ್ಕಲ್ ಬಳಿ ಸೋಮವಾರ ಮುಂಜಾನೆ ಬೈಕ್ ಗೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ ಮೃತಪಟ್ಟ ವ್ಯಕ್ತಿ ಸುರತ್ಕಲ್ ಕೃಷ್ಣಾಪುರ ನಿವಾಸಿ ಮಹಮ್ಮದ್ ಉಮರ್ ಫಾರುಕ್ (26) ಎಂದು ಗುರುತಿಸಲಾಗಿದೆ.
ಉಮರ್ ಫಾರೂಕ್ ಹಂಪನಕಟ್ಟೆಯಿಂದ ಎ.ಬಿ.ಶೆಟ್ಟಿ ವೃತ್ತದ ಬಳಿ ಬರುತ್ತಿದ್ದ ಸಂದರ್ಭ ದಲ್ಲಿ ಬಂದರ್ ಕಡೆಯಿಂದ ಬಂದ ಟ್ಯಾಂಕರ್, ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ವಾಹನದೊಂದಿಗೆ ರಸ್ತೆಗೆ ಅಪ್ಪಳಿಸಿದ ಉಮರ್ ಫಾರೂಕ್ರ ಮೇಲೆ ಟ್ರಕ್ ಚಲಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು. ಇ ಕಾರ್ಟ್ ಕೊರಿಯರ್ ಸಂಸ್ಥೆಯ ಉದ್ಯೋಗಿ : ಉಮರ್ ಫಾರೂಕ್ ಮಂಗಳೂರಿನ ಕೊರಿಯರ್ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದು, ನಿತ್ಯ ಕೃಷ್ಣಾಪುರದಿಂದ ಮಂಗಳೂರಿಗೆ ಬರುತ್ತಿದ್ದರೆನ್ನಲಾಗಿದೆ. ಸೋಮವಾರ ಮಧ್ಯಾಹ್ನ ಸಂಸ್ಥೆಯ ಕೆಲಸದ ನಿಮಿತ್ತ ಹಂಪನಕಟ್ಟದಿಂದ ಸ್ಟೇಟ್ಬ್ಯಾಂಕ್ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸ ಲಾಯಿತು. ಈ ಬಗ್ಗೆ ಕದ್ರಿ ಪೊಲೀಸ್ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.