ಕರ್ನಾಟಕ

ಬಿಬಿಎಂಪಿ ಮೇಲೆ ಕಣ್ಣಿಟ್ಟ ಅಮ್ಮ !!

Pinterest LinkedIn Tumblr

jayaಕರ್ನಾಟಕದ ಕಾವೇರಿಗಾಗಿ ಸತತ ಹೋರಾಟ ನಡೆಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಇದೀಗ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮೇಲೂ ಕಣ್ಣಿಟ್ಟಿದ್ದಾರೆ.

ಹೌದು. ಆಗಸ್ಟ್ 22 ರಂದು ನಡೆಯಲಿರುವ  ಬಿಬಿಎಂಪಿ ಚುನಾವಣೆಯಲ್ಲಿ ಎಐಡಿಎಂಕೆ ಸ್ಪರ್ಧಿಸಲಿದ್ದು ಆ ಮೂಲಕ ಕರ್ನಾಟಕದ ರಾಜಧಾನಿಯಲ್ಲಿಯೂ ತಮ್ಮ ಪ್ರಭಾವವನ್ನು ಬೀರಲು ಅಮ್ಮ ಮುಂದಾಗಿದ್ದಾರೆ. ಈ ಸಂಬಂಧ ಎಐಡಿಎಂಕೆ ನಾಯಕಿ ಆಗಿರುವ ಜಯಲಲಿತಾ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಚೆನ್ನೈನಲ್ಲಿ ಬಿಡುಗಡೆ ಮಾಡಿದ್ದು ಬಿಬಿಎಂಪಿಯ ಏಳು ವಾರ್ಡ್‍ಗಳಲ್ಲಿ ಎಐಡಿಎಂಕೆ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ಎಲ್ಲೆಲ್ಲಿ, ಯಾರ್ಯಾರು ..?
ಓಕಳೀಪುರಂ – ಟಿ.ಸುಬ್ರಮಣಿ, ಜಯನಗರ ಪೂರ್ವ – ಎಂ.ಮುರುಗೇಶ್, ಸುಭಾಷ್ ನಗರ – ಕೆ.ಕುಮಾರ್, ಮುನೇಶ್ವರ ಬ್ಲಾಕ್ – ತುಳಸಿ ಅನ್ಬರಸನ್, ಕಾಟನ್‍ಪೇಟೆ – ಕೆ.ಸುಂದರಮೂರ್ತಿ ಹಾಗೂ ಸಗಾಯ್‍ಪುರ – ಸಗಾಯ್‍ರಾಜ್

Write A Comment