ಕರ್ನಾಟಕದ ಕಾವೇರಿಗಾಗಿ ಸತತ ಹೋರಾಟ ನಡೆಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಇದೀಗ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮೇಲೂ ಕಣ್ಣಿಟ್ಟಿದ್ದಾರೆ.
ಹೌದು. ಆಗಸ್ಟ್ 22 ರಂದು ನಡೆಯಲಿರುವ ಬಿಬಿಎಂಪಿ ಚುನಾವಣೆಯಲ್ಲಿ ಎಐಡಿಎಂಕೆ ಸ್ಪರ್ಧಿಸಲಿದ್ದು ಆ ಮೂಲಕ ಕರ್ನಾಟಕದ ರಾಜಧಾನಿಯಲ್ಲಿಯೂ ತಮ್ಮ ಪ್ರಭಾವವನ್ನು ಬೀರಲು ಅಮ್ಮ ಮುಂದಾಗಿದ್ದಾರೆ. ಈ ಸಂಬಂಧ ಎಐಡಿಎಂಕೆ ನಾಯಕಿ ಆಗಿರುವ ಜಯಲಲಿತಾ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಚೆನ್ನೈನಲ್ಲಿ ಬಿಡುಗಡೆ ಮಾಡಿದ್ದು ಬಿಬಿಎಂಪಿಯ ಏಳು ವಾರ್ಡ್ಗಳಲ್ಲಿ ಎಐಡಿಎಂಕೆ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಎಲ್ಲೆಲ್ಲಿ, ಯಾರ್ಯಾರು ..?
ಓಕಳೀಪುರಂ – ಟಿ.ಸುಬ್ರಮಣಿ, ಜಯನಗರ ಪೂರ್ವ – ಎಂ.ಮುರುಗೇಶ್, ಸುಭಾಷ್ ನಗರ – ಕೆ.ಕುಮಾರ್, ಮುನೇಶ್ವರ ಬ್ಲಾಕ್ – ತುಳಸಿ ಅನ್ಬರಸನ್, ಕಾಟನ್ಪೇಟೆ – ಕೆ.ಸುಂದರಮೂರ್ತಿ ಹಾಗೂ ಸಗಾಯ್ಪುರ – ಸಗಾಯ್ರಾಜ್