ಅಂತರಾಷ್ಟ್ರೀಯ

ಕುಡಿಯುವ 1 ಗ್ಲಾಸ್ ನೀರಿನಲ್ಲಿ ಒಂದು ಕೋಟಿ ಬ್ಯಾಕ್ಟೀರಿಗಳು!

Pinterest LinkedIn Tumblr

water

ಸ್ಟಾಕ್​ಹೋಮ್ ನಾವು ಕುಡಿಯುವ ಒಂದು ಲೋಟ ಕೊಳಾಯಿ ನೀರಿನಲ್ಲಿ 1 ಕೋಟಿಯಷ್ಟು ಬ್ಯಾಕ್ಟೀರಿಯಾಗಳಿರುತ್ತವೆ! ಹಾಂ, ಪ್ರತಿದಿನ ಸಾಕಷ್ಟು ಬಾರಿ ನೀರು ಕುಡಿಯುತ್ತೇವೆ. ಪ್ರತಿ ಬಾರಿಯೂ ಇಷ್ಟೊಂದು ಬ್ಯಾಕ್ಟೀರಿಯಾಗಳು ನಮ್ಮ ಜೀರ್ಣಾಂಗಕ್ಕೆ ಸೇರ್ಪಡೆಗೊಂಡರೆ ಏನಪ್ಪಾ ಗತಿ ಎಂದು ಹೌಹಾರಬೇಡಿ. ಈ ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯಕ್ಕೆ ಹಾನಿ ಮಾಡುವುದಕ್ಕಿಂತಲೂ ಉತ್ತಮಗೊಳಿಸುತ್ತವಂತೆ!

ಹಾಗೆಂದು ಸ್ವೀಡನ್​ನ ಲುಂಡ್ ವಿಶ್ವವಿದ್ಯಾಲಯದ ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

ದೂರದ ನದಿಯಿಂದ ನಗರಗಳಿಗೆ ನೀರು ಸಾಗಿಸಲು ಅಳವಡಿಸಲಾಗಿರುವ ಪೈಪ್​ಗಳು ಮತ್ತು ನೀರು ಸಂಸ್ಕರಣಾ ಘಟಕಗಳಲ್ಲಿ ಮಿಲಿಯಂತರ ಬ್ಯಾಕ್ಟೀರಿಯಾಗಳಿರುತ್ತವೆ. ಬೃಹತ್ ಪೈಪ್​ಗಳಲ್ಲಿ ನೀರು ಹಾದು ಹೋಗುವಾಗ ಪೈಪ್​ನಲ್ಲಿರುವ ಬ್ಯಾಕ್ಟೀರಿಯಾಗಳು ಹಾಗೂ ಸಂಸ್ಕರಣಾ ಘಟಕದಲ್ಲಿರುವ ಬ್ಯಾಕ್ಟೀರಿಯಾಗಳು ನೀರಿನ ಮೂಲಕ ಬರುತ್ತವೆ. ಇವೆಲ್ಲವೂ ಒಳ್ಳೆಯ ಬ್ಯಾಕ್ಟೀರಿಯಾಗಳಾಗಿರುತ್ತವೆ. ಈ ಬ್ಯಾಕ್ಟೀರಿಯಾಗಳು ನೀರನ್ನು ಶುದ್ಧೀಕರಿಸುವುದರ ಜತೆಗೆ ನಮ್ಮ ದೇಹವನ್ನು ಸೇರಿದ ಬಳಿಕ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನುಕೂಲ ಮಾಡುತ್ತವೆಂದು ಸಂಶೋಧಕರು ತಿಳಿಸಿದ್ದಾರೆ.

Write A Comment