ಸ್ಟಾಕ್ಹೋಮ್ ನಾವು ಕುಡಿಯುವ ಒಂದು ಲೋಟ ಕೊಳಾಯಿ ನೀರಿನಲ್ಲಿ 1 ಕೋಟಿಯಷ್ಟು ಬ್ಯಾಕ್ಟೀರಿಯಾಗಳಿರುತ್ತವೆ! ಹಾಂ, ಪ್ರತಿದಿನ ಸಾಕಷ್ಟು ಬಾರಿ ನೀರು ಕುಡಿಯುತ್ತೇವೆ. ಪ್ರತಿ ಬಾರಿಯೂ ಇಷ್ಟೊಂದು ಬ್ಯಾಕ್ಟೀರಿಯಾಗಳು ನಮ್ಮ ಜೀರ್ಣಾಂಗಕ್ಕೆ ಸೇರ್ಪಡೆಗೊಂಡರೆ ಏನಪ್ಪಾ ಗತಿ ಎಂದು ಹೌಹಾರಬೇಡಿ. ಈ ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯಕ್ಕೆ ಹಾನಿ ಮಾಡುವುದಕ್ಕಿಂತಲೂ ಉತ್ತಮಗೊಳಿಸುತ್ತವಂತೆ!
ಹಾಗೆಂದು ಸ್ವೀಡನ್ನ ಲುಂಡ್ ವಿಶ್ವವಿದ್ಯಾಲಯದ ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ದೂರದ ನದಿಯಿಂದ ನಗರಗಳಿಗೆ ನೀರು ಸಾಗಿಸಲು ಅಳವಡಿಸಲಾಗಿರುವ ಪೈಪ್ಗಳು ಮತ್ತು ನೀರು ಸಂಸ್ಕರಣಾ ಘಟಕಗಳಲ್ಲಿ ಮಿಲಿಯಂತರ ಬ್ಯಾಕ್ಟೀರಿಯಾಗಳಿರುತ್ತವೆ. ಬೃಹತ್ ಪೈಪ್ಗಳಲ್ಲಿ ನೀರು ಹಾದು ಹೋಗುವಾಗ ಪೈಪ್ನಲ್ಲಿರುವ ಬ್ಯಾಕ್ಟೀರಿಯಾಗಳು ಹಾಗೂ ಸಂಸ್ಕರಣಾ ಘಟಕದಲ್ಲಿರುವ ಬ್ಯಾಕ್ಟೀರಿಯಾಗಳು ನೀರಿನ ಮೂಲಕ ಬರುತ್ತವೆ. ಇವೆಲ್ಲವೂ ಒಳ್ಳೆಯ ಬ್ಯಾಕ್ಟೀರಿಯಾಗಳಾಗಿರುತ್ತವೆ. ಈ ಬ್ಯಾಕ್ಟೀರಿಯಾಗಳು ನೀರನ್ನು ಶುದ್ಧೀಕರಿಸುವುದರ ಜತೆಗೆ ನಮ್ಮ ದೇಹವನ್ನು ಸೇರಿದ ಬಳಿಕ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅನುಕೂಲ ಮಾಡುತ್ತವೆಂದು ಸಂಶೋಧಕರು ತಿಳಿಸಿದ್ದಾರೆ.