ಬಾಗ್ಲಾದ್: ಯುದ್ಧ, ಸಾವು-ನೋವುಗಳನ್ನೇ ಕಂಡ ಇರಾಕ್ನಲ್ಲಿ ಬರೋಬ್ಬರಿ 43 ವರ್ಷಗಳ ಬಳಿಕ ಶೃಂಗಾರ ಪ್ರಜ್ಞೆಯೊಂದು ಕಂಡು ಬಂತು.
1972ರ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿ ಸೌಂದರ್ಯ ಸ್ಪರ್ಧೆ ನಡೆದಿದ್ದು, 20ರ ಹರೆಯದ ಶೈಮಾ ಅಬ್ದುಲ್ರೆಹಮಾನ್ 4 ದಶಕಗಳಲ್ಲೇ ಮೊದಲ `ಇರಾಕ್ ಸುಂದರಿ’ ಕಿರೀಟವನ್ನು ಮುಡಿಗೇರಿಸಿಕೊಂಡರು.
ಬಾಗ್ದಾದ್ನ ಹೋಟೆಲ್ವೊಂದರಲ್ಲಿ ಬಿಗಿಭದ್ರತೆಯ ನಡುವೆ ಈ ಕಾರ್ಯಕ್ರಮ ನಡೆದಿದ್ದರೂ, ಅಲ್ಲಿ ಸೇರಿದ್ದ ಜನಸ್ತೋಮ ಹೊಸ ಭರವಸೆಯನ್ನು ಹುಟ್ಟುಹಾಕಿತು.
ಶೈಮಾಳನ್ನು ಇರಾಕ್ ಸುಂದರಿ ಎಂದು ಘೋಷಿಸುತ್ತಿದ್ದಂತೆ, ಗ್ಯಾಲರಿಯಲ್ಲಿದ್ದ ಟೈಟ್ ಬ್ಲೇಜರ್ಗಳನ್ನು ತೊಟ್ಟಿದ್ದ ಮೀಸೆ ಚಿಗುರಿದ್ದ ಯುವಕರು ಸಂತೋಷದಿಂದ ಕೂಗಾಡಿತು. “ಇರಾಕ್ ಸುಧಾರಣೆಯತ್ತ ಹೆಜ್ಜೆಯಿಟ್ಟಿರುವುದು ಅತ್ಯಂತ ಖುಷಿಯ ಸಂಗತಿ” ಎಂದರು ಶೈಮಾ.