ಅಂತರಾಷ್ಟ್ರೀಯ

43 ವರ್ಷಗಳ ಬಳಿಕ ಇರಾಕ್‍ನಲ್ಲಿ ಸೌಂದರ್ಯ ಸ್ಪರ್ಧೆ

Pinterest LinkedIn Tumblr

miss-iraq

ಬಾಗ್ಲಾದ್: ಯುದ್ಧ, ಸಾವು-ನೋವುಗಳನ್ನೇ ಕಂಡ ಇರಾಕ್‍ನಲ್ಲಿ ಬರೋಬ್ಬರಿ 43 ವರ್ಷಗಳ ಬಳಿಕ ಶೃಂಗಾರ ಪ್ರಜ್ಞೆಯೊಂದು ಕಂಡು ಬಂತು.

1972ರ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿ ಸೌಂದರ್ಯ ಸ್ಪರ್ಧೆ ನಡೆದಿದ್ದು, 20ರ ಹರೆಯದ ಶೈಮಾ ಅಬ್ದುಲ್‍ರೆಹಮಾನ್ 4 ದಶಕಗಳಲ್ಲೇ ಮೊದಲ `ಇರಾಕ್ ಸುಂದರಿ’ ಕಿರೀಟವನ್ನು ಮುಡಿಗೇರಿಸಿಕೊಂಡರು.

ಬಾಗ್ದಾದ್‍ನ ಹೋಟೆಲ್‍ವೊಂದರಲ್ಲಿ ಬಿಗಿಭದ್ರತೆಯ ನಡುವೆ ಈ ಕಾರ್ಯಕ್ರಮ ನಡೆದಿದ್ದರೂ, ಅಲ್ಲಿ ಸೇರಿದ್ದ ಜನಸ್ತೋಮ ಹೊಸ ಭರವಸೆಯನ್ನು ಹುಟ್ಟುಹಾಕಿತು.

ಶೈಮಾಳನ್ನು ಇರಾಕ್ ಸುಂದರಿ ಎಂದು ಘೋಷಿಸುತ್ತಿದ್ದಂತೆ, ಗ್ಯಾಲರಿಯಲ್ಲಿದ್ದ ಟೈಟ್ ಬ್ಲೇಜರ್‍ಗಳನ್ನು ತೊಟ್ಟಿದ್ದ ಮೀಸೆ ಚಿಗುರಿದ್ದ ಯುವಕರು ಸಂತೋಷದಿಂದ ಕೂಗಾಡಿತು. “ಇರಾಕ್ ಸುಧಾರಣೆಯತ್ತ ಹೆಜ್ಜೆಯಿಟ್ಟಿರುವುದು ಅತ್ಯಂತ ಖುಷಿಯ ಸಂಗತಿ” ಎಂದರು ಶೈಮಾ.

Write A Comment