ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಉದಯ್
ದುಬೈ, ಡಿ.27: ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ, ಖ್ಯಾತ ಹಾಡುಗಾರರೂ ಆಗಿರುವ ಹರೀಶ್ ಶೇರಿಗಾರ್ ನೇತೃತ್ವದಲ್ಲಿ ಮೂರನೇ ಬಾರಿಗೆ ಜನವರಿ 8ರಂದು ಪ್ರದರ್ಶನಗೊಳ್ಳಲಿರುವ ‘ಧೂಮ್ ಧಮಾಕ-2016’ ಕಾಮಿಡಿ ಶೋನ ಟಿಕೇಟ್ ಬಿಡುಗಡೆ ಕಾರ್ಯಕ್ರಮವು ಗುರುವಾರ ದುಬೈಯ ಗಿಸೆಸ್ನ ಫೋರ್ಚುನ್ ಪ್ಲಾಝಾ ಹೊಟೇಲ್ನ ಬ್ಯಾಂಕ್ವನೆಟ್ ಸಭಾಂಗಣದಲ್ಲಿ ನಡೆಯಿತು.
ಜನವರಿ 8 ರಂದು (ಶುಕ್ರವಾರ) ಸಂಜೆ 6 ಗಂಟೆಗೆ ದುಬೈಯ ಇಂಡಿಯನ್ ಹೈಸ್ಕೂಲ್ನ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಅದ್ದೂರಿಯ ‘ಧೂಮ್ ಧಮಾಕ-2016’ ಕಾಮಿಡಿ ಶೋ ಪ್ರದರ್ಶನಗೊಳ್ಳಲಿದೆ. ನಿರ್ಗತಿಕ ಮತ್ತು ಬಡವರಿಗೆ ದೇಣಿಗೆ ಸಂಗ್ರಹಿಸುವ ಮಹತ್ತರ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಿರುವ ಹರೀಶ್ ಶೇರಿಗಾರ್, ಪ್ರದರ್ಶನದ ಬಳಿಕ ದೇಣಿಗೆ ನೀಡುವ ಸಂಸ್ಥೆಯ ಹೆಸರನ್ನು ಘೋಷಿಸಲಿದ್ದಾರೆ.
ಟಿಕೇಟ್ ಬಿಡುಗಡೆ ಸಮಾರಂಭವನ್ನು ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ‘ಧೂಮ್ ಧಮಾಕ-2016’ ಕಾಮಿಡಿ ಶೋನ ಟಿಕೆಟ್ ಬಿಡುಗಡೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಉದ್ಯಮಿ ಹರೀಶ್ ಬಂಗೇರ, ದಿನೇಶ್ ಶೇರಿಗಾರ್ ಬಿಡುಗಡೆಗೊಳಿಸಿದರು.
ಈ ಬಾರಿಯ ಧೂಮ್ ಧಮಾಕದಲ್ಲಿ ಬಾಲಿವುಡ್ನ ಖ್ಯಾತ, ಹೆಸರಾಂತ ಹಾಸ್ಯ ಕಲಾವಿದ, ಹಾಸ್ಯರಾಜ ಎಂದೇ ಖ್ಯಾತರಾಗಿರುವ ಜಾನಿ ಲಿವರ್ ತಮ್ಮ ಪುತ್ರಿ ಜಮಿ ಲಿವರ್ ಅವರೊಂದಿಗೆ ಪ್ರದರ್ಶನ ನೀಡುತ್ತಿರುವುದು ಸಮಾರಂಭಕ್ಕೆ ಮತ್ತಷ್ಟು ಮೆರೆಗುತರಲಿದೆ.
‘ಧೂಮ್ ಧಮಾಕ-2016’ ಕಾಮಿಡಿ ಶೋನಲ್ಲಿ ಹಾಸ್ಯ ನಟ ಜಾನಿ ಲಿವರ್ ತಮ್ಮ ಹಾಸ್ಯವನ್ನು ಪ್ರದರ್ಶಿಸಲಿರುವುದರಿಂದ ಟಿಕೇಟ್ ಖರೀದಿ ಬಲುಜೋರಾಗಿದೆ. ಕಾರ್ಯಕ್ರಮದ ಅರ್ಧದಷ್ಟು ಟಿಕೇಟ್ ಈಗಾಗಲೇ ಖಾಲಿಯಾಗಿದ್ದು, ಇನ್ನರ್ಧದಷ್ಟು ಮಾತ್ರ ಬಾಕಿ ಉಳಿದಿದ್ದು, ಆದಷ್ಟು ಬೇಗ ಖರೀದಿಸಿ, ತಮ್ಮ ಉಪಸ್ಥಿತಿಯನ್ನು ಖಾತರಿಪಡಿಸಿಕೊಳ್ಳಿ.
ಆನ್ಲೈನ್ ಬುಕ್ಕಿಂಗ್ಗಾಗಿ ಈ ವೆಬ್ಸೈಟ್ಗೆ ಲಾಗಿನ್ ಆಗಿರಿ……..
www.dhoomdhamaka2016.com
‘ಧೂಮ್ ಧಮಾಕ-2016’ ಕಾಮಿಡಿ ಶೋನಲ್ಲಿ ಖ್ಯಾತ ನೃತ್ಯ ಪಟುಗಳಾದ ಪ್ರಥಮ ಪ್ರಸಾದ್ ರಾವ್ ಮತ್ತು ಸೂರ್ಯ ಎನ್.ರಾವ್ ಅವರ ಸಮ್ಮಿಲನ ನೃತ್ಯರೂಪಕ ಕೂಡಾ ನಡೆಯಲಿದೆ. ಸಮ್ಮಿಲನದಲ್ಲಿ ವಿವಿಧ ಮಾದರಿ, ವಿನ್ಯಾಸಗಳು, ಭಾರತೀಯ ಶಾಸ್ತ್ರೀಯ ನೃತ್ಯ ಮಾದರಿಗಳು, ಕೂಚುಪುಡಿ ಮತ್ತು ಕಥಕ್ನಂತಹ ನೃತ್ಯ ರೂಪಗಳು ಪ್ರದರ್ಶನಗೊಳ್ಳಲಿದೆ.
ಇವರಿಬ್ಬರು ಬೆಂಗಳೂರಿನಲ್ಲಿ ಮಹಾಮಾಯ ಆರ್ಟ್ಸ್ ಫೌಂಡೇಶನ್ ನಡೆಸುತ್ತಿದ್ದು, ಕಟಕ್ ಅಂತಾರಾಷ್ಟ್ರೀಯ ನೃತ್ಯ ಹಬ್ಬದಲ್ಲಿ ನೃತ್ಯ ಶಿರೋಮಣಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮಾತ್ರವಲ್ಲ ಭುವನೇಶ್ವರಿಯಲ್ಲಿ ನಡೆದ ಶಾಂತಿ ಹಬ್ಬದಲ್ಲಿ ಒಡಿಸ್ಸಾ ಸರ್ಕಾರದಿಂದ ನ್ಯಾಷನಲ್ ಎಕ್ಸಲೆನ್ಸ್ ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಕನ್ನಡ ಚಲನಚಿತ್ರ ಶ್ರೀ ಸಾಯಿ ಚಿತ್ರದಲ್ಲೂ ಅವರು ನಟಿಸಿದ್ದಾರೆ.
ಟಿಕೇಟ್ ಬಿಡುಗಡೆ ಸಮಾರಂಭದಲ್ಲಿ ರೇಡಿಯೋ ಸ್ಪೈಸ್ನ ಸಂದೀಪ್, ಡಿಯೋ ಜಾಕಿಗಳಾದ ಆರ್.ಜೆ.ವೇದ್ ಹಾಗೂ ಆರ್.ಜೆ.ಶ್ರುತಿ ಭಾಗವಹಿಸಿ, ವಿವಿಧ ಸಿನೆಮಾ ನಾಯಕರ ಮಿಮಿಕ್ರಿ ಮಾಡಿ ಮನರಂಜಿಸಿದರು. ಅರ್ಲ್ಜಾಯ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಪ್ರದರ್ಶನದ ಟಿಕೇಟ್ ಸಿಗುವ ಸ್ಥಳ:
ದುಬೈಯ ಅಲ್ರಾಸ್, ಮೀನಾ ಬಝಾರ್, ಕರಾಮ ಹಾಗೂ ದೇರಾದ ಚೋಯ್ತರಾಮ್ಸ್ನ ಔಟ್ಲೆಟ್ ನಲ್ಲಿ ಟಿಕೆಟ್ ಲಭ್ಯವಿದೆ.
ಗಿಸ್ಸೇಸ್ ನ ಅಂಬಾ(ವೀನಸ್) ರೆಸ್ಟೋರೆಂಟ್ ನಲ್ಲಿ ಟಿಕೆಟ್ ಲಭ್ಯವಿದೆ.
ಆನ್ಲೈನ್ ಬುಕ್ಕಿಂಗ್ಗಾಗಿ …….
www.dhoomdhamaka2016.com Mail: hs9466@gmail.com or SMS / what’s up 97155- 6609466