ಕನ್ನಡ ವಾರ್ತೆಗಳು

ಧರ್ಮ ಪ್ರಾಂತದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ.

Pinterest LinkedIn Tumblr

Rosario_book_reals_1

ಮಂಗಳೂರು,ಜ.04 : ಕ್ರೈಸ್ತ ಧರ್ಮದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆಯು ನಗರದ ಮಿಲಾಗ್ರಿಸ್ ಚರ್ಚ‌ನಿಂದ ರೊಸಾರಿಯೋ ಚರ್ಚ್ ನವರೆಗೆ ಸಾವಿರಾರು ಭಕ್ತರ ಮೆರವಣಿಗೆಯು ಮಿಲಾಗ್ರಿಸ್ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ನಡೆಯಿತು.

ಮಂಗಳೂರು ನಗರ ಮತ್ತು ಹೊರ ವಲಯದ ಕೆಥೋಲಿಕ್‌ ಕ್ರೈಸ್ತರು, ಧರ್ಮ ಗುರುಗಳು, ಧರ್ಮ ಭಗಿನಿಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಂಗಳೂರು ಕೈಸ್ತ ಧರ್ಮ ಪ್ರಾಂತದ ಬಿಷಪ್ ಅಲೋಸಿಯಸ್ ಪೌಲ್ ಡಿ’ಸೋಜಾ ಮೆರವಣಿಗೆಗೆ ಚಾಲನೆ ನೀಡಿ, ಅವರು ಹಿಸ್ಟರಿ ಆಫ್ ಮ್ಯಾಂಗಲೂರು ಡಯಾಸಿಸ್ ಪುಸ್ತಕ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಪುಸ್ತಕ ರಚಿಸಿದವರಿಗೆ ಅಬಿನಂದನೆಗಳನ್ನು ಸಲ್ಲಿಸಿ, ದೇವರು ಎಲ್ಲರಿಗೂ ಶಾಂತಿ, ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥಸಿದರು.

Rosario_book_reals_2 Rosario_book_reals_3 Rosario_book_reals_4 Rosario_book_reals_5 Rosario_book_reals_6 Rosario_book_reals_7 Rosario_book_reals_8 Rosario_book_reals_9 Rosario_book_reals_10 Rosario_book_reals_11 Rosario_book_reals_12 Rosario_book_reals_13 Rosario_book_reals_15 Rosario_book_reals_16 Rosario_book_reals_17 Rosario_book_reals_18 Rosario_book_reals_19 Rosario_book_reals_20 Rosario_book_reals_21 Rosario_book_reals_22 Rosario_book_reals_23 Rosario_book_reals_25 Rosario_book_reals_26

ಪ್ರತಿಮೆಗಳ ಆಶೀರ್ವಚನ:
2014ರಲ್ಲಿ ಸಂತ ಪದವಿಗೆ ಪ್ರಾಪ್ತರಾದ ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ ಧರ್ಮಗುರು ಫಾ.ಜೋಸೆಫ್‌ ವಾಸ್‌ ಮತ್ತು ಧರ್ಮ ಭಗಿನಿ ಸಿ.ಮರಿಯಾ ಬೊವಾರ್ಡಿ ಅವರ ಪ್ರತಿಮೆಗಳನ್ನು ಬಿಷಪರು ಈ ಸಂದರ್ಭ ಆಶೀರ್ವದಿಸಿದರು. ಈ ಪ್ರತಿಮೆಗಳನ್ನು ರೊಜಾರಿಯೋ ಕೆಥೆಡ್ರಲ್‌ನಲ್ಲಿ ಜ. 10ರಂದು ಪ್ರತಿಷ್ಠಾಪಿಸಲಾಗುವುದು ಎಂದರು.

ಫಾ. ಡೆನ್ನೀಸ್ ಮೊರಾಸ್ ಪ್ರಭು, ಫಾ. ವೆಲೇರಿಯನ್ ಡಿಸೋಜಾ, ಫಾ. ಜೆ.ಬಿ. ಕ್ರಾಸ್ತಾ, ಶಾಸಕ ಜೆ.ಆರ್. ಲೊಬೊ. ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಮೊದಲಾದ ಗಣ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment