ರಾಷ್ಟ್ರೀಯ

ಸಮ-ಬೆಸ ವಾಹನ ಸಂಚಾರ, ಜ.11ರಂದು ಹೈಕೋರ್ಟ್ ಆದೇಶ

Pinterest LinkedIn Tumblr

Delhi-High-Court-1ನವದೆಹಲಿ: ‘ದೆಹಲಿ ಸರ್ಕಾರವು 2016ರ ಜನವರಿ 1ರಿಂದ ಜಾರಿಗೊಳಿಸಿರುವ ‘ಸಮ-ಬೆಸ ವಾಹನ ಸಂಚಾರ ವ್ಯವಸ್ಥೆಯು’ ಜನವರಿ 11ರವರೆಗೆ ಮುಂದುವರಿಯುತ್ತದೆ. ವಿಷಯದ ಬಗ್ಗೆ ಜನವರಿ 11ರಂದು ಆದೇಶ ನೀಡುತ್ತೇವೆ’ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.

ಇದಕ್ಕೆ ಮುನ್ನ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ದೆಹಲಿಯಲ್ಲಿ ವಾಹನ ದಟ್ಟಣೆಯ ವೇಳೆಯಲ್ಲಿ ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ದೆಹಲಿ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು.

‘ನಮಗೆ 15 ದಿನಗಳು ಸಾಕಾಗುವುದಿಲ್ಲ. ಅಗತ್ಯ ಬಿದ್ದಲ್ಲಿ ಅದರಿಂದಾಚೆಗೂ ನಾವು ಹೋಗಬೇಕಾಗುತ್ತದೆ ಸರ್ಕಾರ ಹೈಕೋರ್ಟ್​ಗೆ ತಿಳಿಸಿತು. ರಾಜಧಾನಿಯ ವಾಹನ ಮಾಲಿನ್ಯ ತಗ್ಗಿಸುವ ಸಲುವಾಗಿ ಸಮ-ಬೆಸ ನೋಂದಣಿ ಸಂಖ್ಯೆ ಆಧಾರದಲ್ಲಿ ಖಾಸಗಿ ವಾಹನಗಳು ದಿನ ಬಿಟ್ಟು ದಿನ ಸಂಚರಿಸುವ ಹೊಸ ವ್ಯವಸ್ಥೆಯನ್ನು ದೆಹಲಿಯ ಆಪ್ ಸರ್ಕಾರ ದೇಶದಲ್ಲೇ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.

Write A Comment