ಕರ್ನಾಟಕ

ಮಕ್ಕಳ ಬೆಳವಣಿಗೆಗೆ ಅಬಾಕಸ್ ಸಹಕಾರಿ: ಶ್ವಾಸಗುರು ವಚನಾನಂದ

Pinterest LinkedIn Tumblr

makkalufiಬೆಂಗಳೂರು: ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಬಾಕಸ್ ಕಲಿಕೆ ಸಹಾಯಕ ಎಂದು ಶ್ವಾಸಗುರು ವಚನಾನಂದ ಅಭಿಪ್ರಾಯಪಟ್ಟಿದ್ದಾರೆ.

ಯುಸಿ ಮಾಸ್ ಅಬಾಕಸ್ ಮತ್ತು ಮೆಂಟಲ್ ಅರ್ಥ್​ವೆುಟಿಕ್ ಪ್ರೆಸ್​ಕ್ಲಬ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅರ್ಥ್​ವೆುಟಿಕ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.

4 ವರ್ಷದ ಮಗು ಕೆಲವೇ ಸೆಕೆಂಡುಗಳಲ್ಲಿ ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಯಾವುದೇ ಯಂತ್ರಗಳ ಬಳಕೆಯಿಲ್ಲದೆ ಉತ್ತರ ನೀಡುವ ಈ ಪದ್ಧತಿ ನಿಜಕ್ಕೂ ಉತ್ತಮ. ಇಂತಹ ಬೌದ್ಧಿಕ ಶಕ್ತಿಯ ವಿಕಸನ ಬಾಲ್ಯದಲ್ಲೇ ಆಗುವುದರಿಂದ ಮುಂಬರುವ ಶೈಕ್ಷಣಿಕ ಸಮಸ್ಯೆಗಳಿಂದ ವಿದ್ಯಾರ್ಥಿ ವಿಚಲಿತವಾಗುವುದು ತಪ್ಪುತ್ತದೆ ಎಂದರು.

ಯುಸಿ ಮಾಸ್​ನ ಎಂಡಿ ಜಯಾ ಸಂತೋಷಿ ಬಾಯಿ ಮಾತನಾಡಿ, ಡಿ.5 ಮತ್ತು 6ರಂದು ನವದೆಹಲಿಯಲ್ಲಿ ಅಬಾಕಸ್ ಮತ್ತು ಮೆಂಟಲ್ ಅರ್ಥ್​ವೆುಟಿಕ್ ಸ್ಪರ್ಧೆ ಆಯೋಜಿಸಲಾಗಿತ್ತು. 20ಕ್ಕೂ ಹೆಚ್ಚು ದೇಶಗಳ 11 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕರ್ನಾಟಕದಿಂದ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿ, 80ಕ್ಕೂ ಹೆಚ್ಚು ಬಹುಮಾನ ಗಳಿಸಿದ್ದಾರೆ ಎಂದರು.

ಈ ಬಾರಿಯ ಸ್ಪರ್ಧೆಯು 200 ಲೆಕ್ಕಗಳನ್ನು ಕೇವಲ 8 ನಿಮಿಷದಲ್ಲಿ ಪರಿಹರಿಸುವ ಸವಾಲು ಹೊಂದಿತ್ತು ಎಂದರು.

ಸ್ಪರ್ಧೆಗಳಲ್ಲಿ ವಿಜೇತರಾಗಿ ಅತ್ಯುತ್ತಮ ಸಾಧನೆ ಮಾಡಿದ 10 ಮಕ್ಕಳಿಗೆ ಬಹುಮಾನ ನೀಡಲಾಯಿತು.

Write A Comment