ಬೆಂಗಳೂರು: ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಬಾಕಸ್ ಕಲಿಕೆ ಸಹಾಯಕ ಎಂದು ಶ್ವಾಸಗುರು ವಚನಾನಂದ ಅಭಿಪ್ರಾಯಪಟ್ಟಿದ್ದಾರೆ.
ಯುಸಿ ಮಾಸ್ ಅಬಾಕಸ್ ಮತ್ತು ಮೆಂಟಲ್ ಅರ್ಥ್ವೆುಟಿಕ್ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅರ್ಥ್ವೆುಟಿಕ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.
4 ವರ್ಷದ ಮಗು ಕೆಲವೇ ಸೆಕೆಂಡುಗಳಲ್ಲಿ ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಯಾವುದೇ ಯಂತ್ರಗಳ ಬಳಕೆಯಿಲ್ಲದೆ ಉತ್ತರ ನೀಡುವ ಈ ಪದ್ಧತಿ ನಿಜಕ್ಕೂ ಉತ್ತಮ. ಇಂತಹ ಬೌದ್ಧಿಕ ಶಕ್ತಿಯ ವಿಕಸನ ಬಾಲ್ಯದಲ್ಲೇ ಆಗುವುದರಿಂದ ಮುಂಬರುವ ಶೈಕ್ಷಣಿಕ ಸಮಸ್ಯೆಗಳಿಂದ ವಿದ್ಯಾರ್ಥಿ ವಿಚಲಿತವಾಗುವುದು ತಪ್ಪುತ್ತದೆ ಎಂದರು.
ಯುಸಿ ಮಾಸ್ನ ಎಂಡಿ ಜಯಾ ಸಂತೋಷಿ ಬಾಯಿ ಮಾತನಾಡಿ, ಡಿ.5 ಮತ್ತು 6ರಂದು ನವದೆಹಲಿಯಲ್ಲಿ ಅಬಾಕಸ್ ಮತ್ತು ಮೆಂಟಲ್ ಅರ್ಥ್ವೆುಟಿಕ್ ಸ್ಪರ್ಧೆ ಆಯೋಜಿಸಲಾಗಿತ್ತು. 20ಕ್ಕೂ ಹೆಚ್ಚು ದೇಶಗಳ 11 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕರ್ನಾಟಕದಿಂದ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿ, 80ಕ್ಕೂ ಹೆಚ್ಚು ಬಹುಮಾನ ಗಳಿಸಿದ್ದಾರೆ ಎಂದರು.
ಈ ಬಾರಿಯ ಸ್ಪರ್ಧೆಯು 200 ಲೆಕ್ಕಗಳನ್ನು ಕೇವಲ 8 ನಿಮಿಷದಲ್ಲಿ ಪರಿಹರಿಸುವ ಸವಾಲು ಹೊಂದಿತ್ತು ಎಂದರು.
ಸ್ಪರ್ಧೆಗಳಲ್ಲಿ ವಿಜೇತರಾಗಿ ಅತ್ಯುತ್ತಮ ಸಾಧನೆ ಮಾಡಿದ 10 ಮಕ್ಕಳಿಗೆ ಬಹುಮಾನ ನೀಡಲಾಯಿತು.