ಮಾಸ್ಕೋ : ದಾದಿಯನ್ನು ದುರುದ್ದೇಶ ಪೂರ್ವಕವಾಗಿ ಮುಟ್ಟಿದ ಎಂಬ ಕಾರಣಕ್ಕಾಗಿ ವೈದ್ಯನೊಬ್ಬ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆಗಾಗಿ ಆಸ್ಪತ್ರಗೆ ಬಂದ 56 ವರ್ಷದ ವ್ಯಕ್ತಿಯನ್ನು ಬಡಿದುಕೊಂದ ಘಟನೆ ರಷ್ಯಾದ ದಕ್ಷಿಣ ಭಾಗದ ಬೆಲ್ಗೊರೋಡ್ ಎಂಬಲ್ಲಿ ನಡೆದಿದ್ದು,ಈ ವೈದ್ಯನ ರೋಷಾವೇಶದ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೋ ವೀಕ್ಷಿಸಿ..
ಬಿಡಿಸಲು ಬಂದ ವ್ಯಕ್ತಿಗೂ ರುದ್ರತಾಂಡವವಾಡುತ್ತಿದ್ದ ವೈದ್ಯ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವೇಳೆನರ್ಸ್ಗಳೆಲ್ಲಾ ಹೆದರಿ ಮೂಕ ವಿಸ್ಮಿತರಾಗಿ ನೋಡುತ್ತಿದ್ದರು. ವೈದ್ಯನ ಮಾರಣಾಂತಿಕ ಪಂಚ್ಗಳಿಗೆ ರೋಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.
ಡಿಸೆಂಬರ್ 29 ರಂದು ಘಟನೆ ನಡೆದಿದ್ದು ,ವೈದ್ಯ ಇಲ್ಯಾ ಜೆಲೆಂಡಿನೊವ್ ನ ವಿರುದ್ದ ಸರ್ಕಾರ ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಿದೆ.
-ಉದಯವಾಣಿ