ಅಂತರಾಷ್ಟ್ರೀಯ

ನರ್ಸ್‌ಳನ್ನು ಮುಟ್ಟಿದ ರೋಗಿಯನ್ನು ಕೊಂದ ವೈದ್ಯ:ವೈರಲ್‌ ವಿಡಿಯೋ

Pinterest LinkedIn Tumblr

russia-doctorಮಾಸ್ಕೋ : ದಾದಿಯನ್ನು ದುರುದ್ದೇಶ ಪೂರ್ವಕವಾಗಿ ಮುಟ್ಟಿದ ಎಂಬ ಕಾರಣಕ್ಕಾಗಿ ವೈದ್ಯನೊಬ್ಬ ಅನಾರೋಗ್ಯಕ್ಕೀಡಾಗಿ ಚಿಕಿತ್ಸೆಗಾಗಿ ಆಸ್ಪತ್ರಗೆ ಬಂದ 56 ವರ್ಷದ ವ್ಯಕ್ತಿಯನ್ನು ಬಡಿದುಕೊಂದ ಘಟನೆ ರಷ್ಯಾದ ದಕ್ಷಿಣ ಭಾಗದ ಬೆಲ್ಗೊರೋಡ್‌ ಎಂಬಲ್ಲಿ ನಡೆದಿದ್ದು,ಈ ವೈದ್ಯನ ರೋಷಾವೇಶದ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೋ ವೀಕ್ಷಿಸಿ..

ಬಿಡಿಸಲು ಬಂದ ವ್ಯಕ್ತಿಗೂ ರುದ್ರತಾಂಡವವಾಡುತ್ತಿದ್ದ ವೈದ್ಯ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವೇಳೆನರ್ಸ್‌ಗಳೆಲ್ಲಾ ಹೆದರಿ ಮೂಕ ವಿಸ್ಮಿತರಾಗಿ ನೋಡುತ್ತಿದ್ದರು. ವೈದ್ಯನ ಮಾರಣಾಂತಿಕ ಪಂಚ್‌ಗಳಿಗೆ ರೋಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

ಡಿಸೆಂಬರ್‌ 29 ರಂದು ಘಟನೆ ನಡೆದಿದ್ದು ,ವೈದ್ಯ ಇಲ್ಯಾ ಜೆಲೆಂಡಿನೊವ್‌ ನ ವಿರುದ್ದ ಸರ್ಕಾರ  ಪ್ರಕರಣ ದಾಖಲಿಸಿಕೊಂಡು ಜೈಲಿಗಟ್ಟಿದೆ.
-ಉದಯವಾಣಿ

Write A Comment