ರಾಷ್ಟ್ರೀಯ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಡರ್ಟಿ ‘ಪೋಲಿ’ಸ್ ವೀಡಿಯೊ

Pinterest LinkedIn Tumblr

dirtyಅಹಮ್ಮದಾಬಾದ್​ ಜ.10 : ಪೊಲೀಸ್​ ಅಧಿಕಾರಿಯೊಬ್ಬರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಟೀಕೆಗೆ ಗುರಿಯಾಗಿದ್ದಾರೆ. ಅಶ್ಲೀಲ ಕಾರಣಕ್ಕೆ ಈ ಪೊಲೀಸ್​ ಅಧಿಕಾರಿ ಸುದ್ದಿಗೆ ಬಂದಿದ್ದಾರೆ. ಇಲ್ಲಿನ ಸ್ಥಳೀಯ ಉತ್ಸವವೊಂದರಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್​​ ಬೇಕು ಬೇಕೆಂದೇ ಮಹಿಳೆಯರನ್ನು ತಾಗಿಕೊಂಡು ಹೋಗುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆಯರು ಮಾತ್ರ ಅಲ್ಲದೆ, ಪುರುಷರ ಮೇಲೂ ಇವರು ತಾಗಿಕೊಂಡೇ ಹೋಗುತ್ತಿದ್ದರು ಎಂದು ಸುದ್ದಿಯಾಗಿದೆ. ಅನಾಮಿಕ ವ್ಯಕ್ತಿಯೊಬ್ಬ ಈ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ಡಿಸೆಂಬರ್​ ಕೊನೆಯ ವಾರದಲ್ಲಿ ಈ ಉತ್ಸವ ನಡೆದಿತ್ತು. ಕನ್ಕರೀಯಾ ಕೆರೆಯ ದಂಡೆಯಲ್ಲಿ ಏಳು ದಿನಗಳ ಕಾಲ ಈ ಕಲೆ ಮತ್ತು ಸಾಂಸ್ಕೃತಿಕ ಉತ್ಸವ ನಡೆಯುತ್ತದೆ.  ಆದರೆ, ಈ ವೀಡಿಯೋದಲ್ಲಿರುವ ಪೊಲೀಸ್​ನ ಮುಖ ಕಾಣುತ್ತಿಲ್ಲ. ಆದರೆ, ಮಾಧ್ಯಮಗಳು, ಸಾಮಾಜಿಕ ಜಾಲತಾಣ, ವಾಟ್ಸ್​ಆಪ್​ನಲ್ಲಿ ಈ ವೀಡಿಯೋ ಹರಿದಾಡುತ್ತಿದೆ. ಇನ್ನು, ಪೊಲೀಸರು ಕೂಡಾ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Write A Comment