ಅಹಮ್ಮದಾಬಾದ್ ಜ.10 : ಪೊಲೀಸ್ ಅಧಿಕಾರಿಯೊಬ್ಬರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಟೀಕೆಗೆ ಗುರಿಯಾಗಿದ್ದಾರೆ. ಅಶ್ಲೀಲ ಕಾರಣಕ್ಕೆ ಈ ಪೊಲೀಸ್ ಅಧಿಕಾರಿ ಸುದ್ದಿಗೆ ಬಂದಿದ್ದಾರೆ. ಇಲ್ಲಿನ ಸ್ಥಳೀಯ ಉತ್ಸವವೊಂದರಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಬೇಕು ಬೇಕೆಂದೇ ಮಹಿಳೆಯರನ್ನು ತಾಗಿಕೊಂಡು ಹೋಗುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆಯರು ಮಾತ್ರ ಅಲ್ಲದೆ, ಪುರುಷರ ಮೇಲೂ ಇವರು ತಾಗಿಕೊಂಡೇ ಹೋಗುತ್ತಿದ್ದರು ಎಂದು ಸುದ್ದಿಯಾಗಿದೆ. ಅನಾಮಿಕ ವ್ಯಕ್ತಿಯೊಬ್ಬ ಈ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ಡಿಸೆಂಬರ್ ಕೊನೆಯ ವಾರದಲ್ಲಿ ಈ ಉತ್ಸವ ನಡೆದಿತ್ತು. ಕನ್ಕರೀಯಾ ಕೆರೆಯ ದಂಡೆಯಲ್ಲಿ ಏಳು ದಿನಗಳ ಕಾಲ ಈ ಕಲೆ ಮತ್ತು ಸಾಂಸ್ಕೃತಿಕ ಉತ್ಸವ ನಡೆಯುತ್ತದೆ. ಆದರೆ, ಈ ವೀಡಿಯೋದಲ್ಲಿರುವ ಪೊಲೀಸ್ನ ಮುಖ ಕಾಣುತ್ತಿಲ್ಲ. ಆದರೆ, ಮಾಧ್ಯಮಗಳು, ಸಾಮಾಜಿಕ ಜಾಲತಾಣ, ವಾಟ್ಸ್ಆಪ್ನಲ್ಲಿ ಈ ವೀಡಿಯೋ ಹರಿದಾಡುತ್ತಿದೆ. ಇನ್ನು, ಪೊಲೀಸರು ಕೂಡಾ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.