ರಾಷ್ಟ್ರೀಯ

2ನೇ ದಿನವೂ ವಿಚಾರಣೆಗೆ ಹಾಜರಾದ ಸಲ್ವಿಂದರ್ ಸಿಂಗ್

Pinterest LinkedIn Tumblr

Salwinder-ನವದೆಹಲಿ: ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪಂಜಾಬ್ ಎಸ್​ಪಿ ಸಲ್ವಿಂದರ್ ಸಿಂಗ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಎರಡನೇ ದಿನವೂ ಸಹ ವಿಚಾರಣೆಗೆ ಒಳಪಡಿಸುತ್ತಿದೆ. ಸಲ್ವಿಂದರ್ ಸಿಂಗ್ ಮಂಗಳವಾರ ಎನ್​ಐಎ ಕೇಂದ್ರ ಕಚೇರಿಯಲ್ಲಿ ವಿಚಾರಣೆಗಾಗಿ ಹಾಜರಾಗಿದ್ದಾರೆ.

ಸೋಮವಾರ ಎನ್​ಐಎ ಸಲ್ವಿಂದರ್ ಸಿಂಗ್​ರನ್ನು ವಿಚಾರಣೆಗೆ ಒಳಪಡಿಸಿದ್ದು, ದಾಳಿಯ ಹಿಂದಿನ ದಿನ ನಡೆದ ಘಟನೆಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ. ಸಲ್ವಿಂದರ್ ಸಿಂಗ್​ರನ್ನು ಸುಳ್ಳು ಪತ್ತೆ ಪರೀಕ್ಷೆಗೂ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಪಹರಣದ ದಿನ ಸಲ್ವಿಂದರ್ ಜತೆಯಲ್ಲಿದ್ದ ಅವರ ಸ್ನೇಹಿತ ರಾಜೇಶ್ ಮತ್ತು ಅವರ ಅಡುಗೆಯವನನ್ನೂ ಎನ್​ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ಉಗ್ರರ ದಾಳಿ ಸಂಬಂಧ ತನಿಖೆಯನ್ನು ಚುರುಕುಗೊಳಿಸಿರುವ ಪಠಾಣ್​ಕೋಟ್ ವಾಯುನೆಲೆ ಹೊರಭಾಗದಲ್ಲಿ ಒಂದು ಮೊಬೈಲ್ ಪೋನ್, ಎ.ಕೆ. 47 ಬಂದೂಕಿನ ಮ್ಯಾಗಜೀನ್ ಮತ್ತು ಬೈನಾಕುಲರ್​ನ್ನು ಸೋಮವಾರ ವಶಪಡಿಸಿಕೊಂಡಿದೆ. 10 ಜನರ ವಿಶೇಷ ತಂಡ ಪಠಾಣ್​ಕೋಟ್ ವಾಯುನೆಲೆ ಸುತ್ತಮುತ್ತ ಸುಳಿವುಗಳಿಗಾಗಿ ಹುಡುಕಾಟ ನಡೆಸುತ್ತಿದೆ.

Write A Comment