ಕನ್ನಡ ವಾರ್ತೆಗಳು

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ದುಬೈ ಸಮಿತಿ ವತಿಯಿಂದ ಎಪಿ ಉಸ್ತಾದರಿಗೆ ಸನ್ಮಾನ

Pinterest LinkedIn Tumblr

Dubai_ustad_sanmana

ದುಬೈ, ನ.16: ‘ಕರ್ನಾಟಕ ಯಾತ್ರೆ’ಯ ನಾಯಕ, ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಪಿ ಅಬೂಬಕರ್ ಮುಸ್ಲಿಯಾರ್‌ರನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ದುಬೈ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ದುಬೈ ಅಬೂಹೈಲ್‌ನಲ್ಲಿರುವ ಐಸಿಎಫ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದುಬೈ ಝೋನ್ ಕೆಸಿಎಫ್ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಉದ್ಯಮಿ, ಸಮಾಜ ಸೇವಕ ಸಲೀಂ ಅಲ್ತಾಫ್ ಫರಂಗಿಪೇಟೆ, ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ನಾಯಕರಾದ ಮಹಬೂಬ್ ಸಖಾಫಿ ಕಿನ್ಯ, ಇಕ್ಬಾಲ್ ಕಾಜೂರು, ನಝೀರ್ ಕೆಮ್ಮಾರ, ಮೂಸ ಬಸರ, ಶಾರ್ಜಾ ಕೆಸಿಎಫ್ ಅಧ್ಯಕ್ಷ ಅಬ್ದುರ್ರಝಾಕ್ ಹಾಜಿ ಜೆಲ್ಲಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಎಪಿ ಉಸ್ತಾದರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಪಿ ಉಸ್ತಾದರು, ಕರ್ನಾಟಕ ಯಾತ್ರೆಯ ಯಶಸ್ವಿಗೆ ಕೆಸಿಎಫ್ ಕಾರ್ಯಕರ್ತರ ಬೆಂಬಲ ಮತ್ತು ಪರಿಶ್ರಮವೇ ಕಾರಣ ಎಂದರು. ಇದೇ ಸಂದರ್ಭದಲ್ಲಿ ದುಬೈನ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಎಪಿ ಉಸ್ತಾದರನ್ನು ಗೌರವಿಸಲಾಯಿತು.

ಮಅದಿನ್ ಅಕಾಡಮಿ ಚೇರ್ಮನ್ ಸೈಯದ್ ಇಬ್ರಾಹೀಮುಲ್ ಖಲೀಲುಲ್ ಬುಖಾರಿ ಕಡಲುಂಡಿ, ದುಬೈ ಮರ್ಕಝ್ ಅಧ್ಯಕ್ಷ ಕಟ್ಟಿಪ್ಪಾರ ಅಬೂಬಕರ್ ಮುಸ್ಲಿಯಾರ್, ಸೈಯದ್ ತಾಹಾ ಬಾಫಖಿ ತಂಙಳ್ ಸೇರಿದಂತೆ ಅನೇಕ ಉಲಮಾಗಳು ಮತ್ತು ನಾಯಕರು ಉಪಸ್ಥಿತರಿದ್ದರು.

Write A Comment