ಕನ್ನಡ ವಾರ್ತೆಗಳು

ಮನೆಯೋಳಗೆ ನುಗ್ಗಿದ ಚಿರತೆ ಮಲಗಿದ್ದವರ ಮೇಲೆ ದಾಳಿ | ಚಿರತೆ ಅಟ್ಟಿಸಿ ಗಂಡನ ಪ್ರಾಣ ಉಳಿಸಿದ ಪತ್ನಿ| ವ್ಯಕ್ತಿ ಆಸ್ಪತ್ರೆಗೆ ದಾಖಲು

Pinterest LinkedIn Tumblr

cheeta

 

(ಸಾಂದರ್ಭಿಕ ಚಿತ್ರ)

ಉಡುಪಿ: ರಾತ್ರಿ ಹೊತ್ತಲ್ಲಿ  ನಾಯಿಯನ್ನು ಭೇಟೆಯಾಡಲು  ಬಂದಿದ್ದ ಚಿರತೆಯೊಂದು ಮನೆಯೋಳಗೆ ನುಗ್ಗಿ  ಮಲಗಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆ ಉಡುಪಿಯ ಕುಕ್ಕೆಹಳ್ಳಿಯಲ್ಲಿ ನಿನ್ನೆ ತಡ ರಾತ್ರಿ  ನಡೆದಿದೆ.

ಮನೆಯಲ್ಲಿ ಸಾಕಿದ ನಾಯಿನ್ನು ಆಹಾರಕ್ಕಾಗಿ ಅರಸಿ ಬಂದ ಚಿರತೆ ಮನೆಯೊಳಗೆ ಪ್ರವೇಶಿಸಿದೆ. ಒಳ ಬಂದ ಚಿರತೆ ಮನೆಯೊಳಗೆ ಮಲಗಿದ್ದ ಮನೆ ಮಾಲಕ ಮಂಜುನಾಥ  ನಾಯ್ಕ್  ಎನ್ನುವವರ ಮೇಲೇ ಏಕಾ ಏಕಿ ಏರಗಿದೆ,ಮಂಜುನಾಥ್ ಬೊಬ್ಬೆ ಹಾಕುತ್ತಿದ್ದಂತೆ ಹೆಂಡತಿ ಎಚ್ಚರಗೊಂಡಾಗ ಚಿರತೆ ಗಂಡನ ಮೇಲೆ ದಾಳಿ ಮಾಡುತ್ತಿರುವುದನ್ನು ಗಮನಿಸಿ ಪಕ್ಕದಲ್ಲೆ ಇದ್ದ ದೊಣ್ಣೆಯಿಂದ ಚಿರತೆಯನ್ನು  ಹೊಡೆದು  ಓಡಿಸಿದ್ದಾರೆ,ಗಂಭಿರ ಗಾಯಗೊಂಡ ಮಂಜುನಾಥರನ್ನು ಕೂಡಲೇ ಮಣಿಪಾಲದ ಕೆ ಎಂ ಸಿ ಆಸ್ಪತ್ರೆ ಗೆ ದಾಖಲಿಸಿದ್ದಾರೆ.

cheetha

 

(ಸಾಂದರ್ಭಿಕ ಚಿತ್ರ)

 

ಕಳೆದ ಕೆಲವು ಸಮಯಗಳಿಂದ ಕುಕ್ಕೆಹಳ್ಳಿ ಭಾಗಗಳಲ್ಲಿ ಕಾಡೆಮ್ಮೆ ,ಚಿರತೆಯಂತಹ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಜನ ಭಯಭೀತರಾಗಿ ಓಡಾಡುವಂತಾಗಿದೆ.ಅದೆಷ್ಟೆ ಬಾರಿ ಸಂಭಂಧಪಟ್ಟ  ಅರಣ್ಯ ಆಧಿಕಾರಿಗಳ ಬಳಿ ದೂರಿಕೊಂಡರು  ಯಾವುದೇ ಪ್ರಯೋಜನವಾಗಿಲ್ಲ ಇದೀಗ ಕಾಡು ಪ್ರಾಣಿಗಳು ಮನೆಯೊಳಗೆ ನುಗ್ಗಿ ಮನುಷ್ಯರ ಪ್ರಾಣ ತಿನ್ನುವವರೆಗೆ ಬಂದಿದೆ.

ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕಾಡು ಪ್ರಾಣಿಗಳಿಂದ ರಕ್ಷಣೆ ಕೊಡಬೇಕೆಂದು ಕುಕ್ಕೆ ಹಳ್ಳಿ ಗ್ರಾಮಸ್ಥರ ಆಗ್ರಹ.

Write A Comment