ಕನ್ನಡ ವಾರ್ತೆಗಳು

ಕಂಬಳ ನಿಷೇದದ ಬಗ್ಗೆ ರಾಜ್ಯ ಸರಕಾರ ಸುಪ್ರಿಂಗೆ ಮೇಲ್ಮನವಿ ಸಲ್ಲಿಸಲಿ: ಸುದ್ದಿಗೋಷ್ಟಿಯಲ್ಲಿ ದೀಪಕ್ ಕುಮಾರ್ ಶೆಟ್ಟಿ

Pinterest LinkedIn Tumblr

ಕುಂದಾಪುರ : ಕರಾವಳಿ ಜಿಲ್ಲೆಗಳಲ್ಲಿ ಸಾವಿರಾರು ವರ್ಷಗಳ ಇತಿಹಾಸವುಳ್ಳ  ಜನಪದ ಕ್ರೀಡೆಯಾಗಿ ನಡೆಸಿಕೊಂಡು ಬಂದಿರುವ  ಕಂಬಳ ಕ್ರೀಡೆಯನ್ನು ಸುಪ್ರೀಂ ಕೋಟ್೯ ನಿಷೇಧಿಸಿದ್ದು ಸರಕಾರ ಹಾಗೂ ಜಿಲ್ಲಾಡಳಿತ ಸುಪ್ರಿಂ ಕೋಟಿ೯ಗೆ ಮೇಲ್ಮನವಿ ಸಲ್ಲಿಸಿ ಮನವರಿಕೆ ಮಾಡಿ ಕಂಬಳ ಕ್ರೀಡೆಯನ್ನು ನಡೆಸಲು ಅನುವು ಮಾಡಿ ಕೋಡಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳೀದ್ದಾರೆ.

ಅವರು ಸೋಮವಾರ ಕುಂದಾಪುರದಲ್ಲಿ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

Kambala_Deepak Kumar shetty Kambala_Deepak Kumar shetty (1) Kambala_Deepak Kumar shetty (2)

 

ಕಂಬಳ ಎನ್ನುವುದು ಮೋಜು ಮಸ್ತಿಗಾಗಿ ನಡೆಯುವುದಲ್ಲ ಬದಲಾಗಿ ರೈತಾಪಿ ಜನರ ಕೆಲಸ ಕಾರ್ಯಗಳ ಮುಕ್ತಾಯದ ಬಳಿಕ (ನಾಟಿ ಹಾಗೂ ಕೊಯ್ಲು) ತಮಗೆ ಬೇಸಾಯದಲ್ಲಿ ಸಹಕರಿಸಿದ ಕೋಣಗಳೊಂದಿಗೆ ಹೊಂದಿರುವ ಸಂಬಂದವನ್ನು ಕಂಬಳದ ರೂಪದಲ್ಲಿ ಮನೋರಂಜನೆಯಾಗಿ ನಡೆಸಲಾಗುತ್ತದೆ. ಕಂಬಳ ನಿಷೇದದಿಂದ ಕರಾವಳಿ ಜಿಲ್ಲೆಗಳ ರೈತರ ಮುಖದಲ್ಲಿ ಇಂದು ಸೂತಕದ ಛಾಯೆ ಮೂಡಿದೆ.

ನ್ಯಾಯಾಲಯದ ತೀಪ೯ನ್ನು ಪ್ರಶ್ನಿಸುವಂತಿಲ್ಲ ಅದರ ಬಗ್ಗೆ ಅಪಾರ ಗೌರವವಿದ್ದು  ರಾಜ್ಯ ಸರಕಾರ ಜಿಲ್ಲಾಡಳಿತ ನ್ಯಾಯಾಲಯಕ್ಕೆ ಕಂಬಳದ ಕುರಿತು ಮನವರಿಕೆ ಮಾಡಿಕೊಡಬೇಕು. ಈ ಕುರಿತು ಕರಾವಳಿ ಜಿಲ್ಲೆಗಳ ಸಂಸದರು ಶಾಸಕರು ಕಾಯ೯ಪ್ರವತ್ತರಾಗಬೇಕೆಂದು ದೀಪಕ್ ಕುಮಾರ್ ಶೆಟ್ಟಿ ಒತ್ತಾಯಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕುಂದಾಪುರ ತಾಲೂಕು ರೈತ ಸಂಘದ ಉಪಾಧ್ಯಕ್ಷ ವಸಂತ ಹೆಗ್ಡೆ ಉಪಸ್ಥಿತರಿದ್ದರು.

Write A Comment