ಕನ್ನಡ ವಾರ್ತೆಗಳು

ಫೊಟೊಗ್ರಫಿ ಸ್ಪರ್ಧೆ : ಕರ್ನಾಟಕದ ಪ್ರವಾಸಿ ತಾಣಗಳು ವಿಭಾಗದಲ್ಲಿ ರಾಕೇಶ್ ಕೊಣಾಜೆಗೆ ತೃತೀಯ ಸ್ಥಾನ

Pinterest LinkedIn Tumblr

rakesh_award_photogrph_udup

ಮಂಗಳೂರು,ನ.17 : ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಸ್ತುತ ಪಡಿಸಿರುವ ಅಖಿಲ ಭಾರತ ಮಟ್ಟದ ಫೊಟೊಗ್ರಫಿ ಸ್ಪರ್ಧೆಯ ಕರ್ನಾಟಕದ ಪ್ರವಾಸಿ ತಾಣಗಳು ವಿಭಾಗದಲ್ಲಿ ಛಾಯಾಗ್ರಾಹಕ ರಾಕೇಶ್ ಕೊಣಾಜೆ ಪ್ರಸ್ತುತ ಪಡಿಸಿದ ಉಡುಪಿ ಕೃಷ್ಣ ದೇವಾಲಯ ಛಾಯಾಚಿತ್ರವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

rakesh_award_photogrph_chat

ಈ ಚಿತ್ರವನ್ನು ಉಡುಪಿ ಕೃಷ್ಣ ದೇವಸ್ಥಾನದ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಕ್ಲಿಕ್ ಮಾಡಲಾಗಿದೆ. ಸ್ಪರ್ಧೆಗೆ ದೇಶದಾದ್ಯಂತ ಸುಮಾರು 120ಕ್ಕೂ ಅಧಿಕ ಸಂಖ್ಯೆಯ ಛಾಯಾಗ್ರಾಹಕರು ತಮ್ಮ ಛಾಯಾಚಿತ್ರಗಳನ್ನು ಕಳುಹಿಸಿದ್ದರು.

Write A Comment