ಕನ್ನಡ ವಾರ್ತೆಗಳು

ನವೆಂಬರ್ 23 ಭಾನುವಾರ ಶೇಫಿನ್ಸ್ ವತಿಯಿಂದ ಕುಂದಾಪುರದ ಪ್ರಥಮ ಉಚಿತ ಉದ್ಯೋಗ ಮೇಳ

Pinterest LinkedIn Tumblr
Shephins_Free_Job
ಕುಂದಾಪುರ : ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಕೇಂದ್ರ ಕಛೇರಿ ಹೊಂದಿದ್ದು, ಉಡುಪಿ ಮತ್ತು ಕುಂದಾಪುರಗಳಲ್ಲಿ ಯಶಸ್ವಿಯಾಗಿ ಹಲವಾರು ಸಮಾಜಮುಖಿ ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸಂಸ್ಥೆ “ಶೆಫಿನ್ಸ್” ನವೆಂಬರ್ 23 ರಂದು ಬಾನುವಾರ ಕುಂದಾಪುರದ ಪ್ರಪ್ರಥಮ ಉದ್ಯೋಗ ಮೇಳವನ್ನು ಆಯೋಜಿಸುತ್ತಿದ್ದು ಇದು ಉದ್ಯೋಗಾಥಿ೯ಗಳಿಗೆ ಸಂಪೂಣ೯ ಉಚಿತ ಸೇವೆಯಾಗಿರುತ್ತದೆ. ಎಂದು ಸಂಸ್ಥೆಯ ಮುಖ್ಯಸ್ಥೆ ಶೆಲಿ೯ ಮನೋಜ್  ಹೇಳೀದ್ದಾರೆ.
ಅವರು ಸೋಮವಾರ ಕುಂದಾಪುರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

Shephins_Free_Job (2) Shephins_Free_Job (1)
ಪೂವಾಹ್ನ 9.30 ರಿಂದ ಸಂಜೆ 5.೦೦ ಗಂಟೇಯವರೆಗೆ ನಡೇಯುವ ಈ ಉದ್ಯೋಗ ಮೇಳದಲ್ಲಿ ಕುಂದಾಪುರದ ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಹಲವು ಉದ್ಯೋಗದಾತರು ಆಗಮಿಸಲಿದ್ದು, ಉದ್ಯೋಗಾಥಿ೯ಗಳು ಅವರ ನೇರ ಸಂದಶ೯ನಕ್ಕೆ ಅವಕಾಶವಿರುತ್ತದೆ. ಅಲ್ಲದೇ ನವೆಂಬರ್ ೩೦ರಂದು ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ “ಸಂದಶ೯ನ ಎದುರಿಸುವ ತರಬೇತಿ” ಶಿಬಿರಕ್ಕೂ ನೊಂದಣಿ ಮಾಡಿಕೊಳ್ಳಬಹುದಾಗಿದೆ.

ಈ ಶಿಬಿರದ ವಿಶೇಷತೆಯೆಂದರೆ ಸಂಸ್ಥೆಯ ತನ್ನ ಮುಖವಾಣಿ “ಶೆಫಿನ್ಸ್ ನ್ಯೂಸ್ ಲೆಟರ್ ” ಮೂಲಕ ಲಭ್ಯವಿರುವ ಉದ್ಯೋಗಾಥಿ೯ಗಳ ಸಂಕ್ಷೀಪ್ತ ವಿವರಗಳನ್ನು ಕುಂದಾಪುರದ ಮತ್ತು ಉಡುಪಿ ಜಿಲ್ಲೆಯ ಆಯ್ದ ಉದ್ಯೋಗದಾತರಿಗೆ ತಲುಪಿಸಿದ್ದು, ಉದ್ಯೋಗಾಥಿ೯ಗಳು ಕೇವಲ ಅಂದು ಆಗಮಿಸಿದ ಉದ್ಯೋಗದಾತರಲಷ್ಟೆ ಅಲ್ಲದೆ ಇತರರ ಬಳಿಯೂ ಉದ್ಯೋಗ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಎಲ್ಲಾ ಆಸಕ್ತ ಉದ್ಯೋಗಾಥಿ೯ಗಳು ‘ಶೆಫಿನ್ಸ್ ಇಂಗ್ಲಿಷ್ ಅಕಾಡೆಮಿ’ ಶಾಂತಿನಿಕೇತನ ರಸ್ತೆ, ನೆಹರೂ ಮೈದಾನದ ಎದುರು, ಕುಂದಾಪುರ ಇಲ್ಲಿ ನಡೆಯುವ ಮೇಳದಲ್ಲಿ 23ರ ಮುಂಜಾನೆ 9.30 ಯಿಂದ ಸಾಯಂಕಾಲ 5.00 ಗಂಟೆಯ ಒಅಳಗೆ ತಮ್ಮ ವೈಯಕ್ತಿಕ ವಿವರಗಳೊಂದಿಗೆ ಆಗಮಿಸುವಂತೆ ಕೋರಲಾಗಿದೆ. ಈ ಸ್ಥಳವು ಕುಂದಾಪುರದ ಶಾಸ್ತ್ರೀ ಸಕ೯ಲ್ ಮತ್ತು ಬೊಬ್ಬಯ೯ ಕಟ್ಟೆ ಬಸ್ಸು ನಿಲ್ದಾಣಗಳ ಸಾಮಾನ್ಯ ಮಧ್ಯಭಾಗದಲ್ಲಿರುವ ನೆಹರೂ ಮೈದಾನದ ಎದುರಿಗಿರುವ ಶಾಂತಿನಿಕೇತನ ರಸ್ತೆಯಲ್ಲಿರುವ ‘ಜೈ ಶ್ರೀರಾಮ್’ ಕಟ್ಟಡದಲ್ಲಿ ಕಾಯಾ೯ಚರಿಸುತ್ತಿದೆ.
ಸುಮಾರು 15 ಕ್ಕೂ ಅಧಿಕ ವಿವಿಧ ಕೈಗಾರಿಕ ಕಂಪೆನಿಗಳು, ಕಂಪೆನಿಗಳು ಈ ಉದೋಗ ಮೇಳಕ್ಕೆ ಉದ್ಯೋಗದಾತರಾಗಿ ಬರುತ್ತಿದ್ದಾರೆ. ಆಸಕ್ತರು ಇಲ್ಲಿಗೆ ಬರಬಹುದು ಯಾವುದೇ ವಿದ್ಯಾರ್ಹತೆ ಅಗತ್ಯವಿಲ್ಲ ಎನ್ನಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಉಪಾದ್ಯಕ್ಷ ಪ್ರಸಾದ್ ಶೆಟ್ಟಿ, ವ್ಯವಹಾರ ವಿಭಾಗದ ರಕ್ಷಿತ್ ಶೆಟ್ಟಿ, ತರಬೇತುದಾರೆ ಸುಪ್ರೀತಾ ಉಪಸ್ಥಿತರಿದ್ದರು.

Write A Comment