ಮಂಗಳೂರು, ನ. 17: ಮಕ್ಕಳ ದಿನಾಚರಣೆ ದಿನದಂದು ಆರಂಭವಾದ ಚೈಲ್ಡ್‌ಲೈನ್ ಸೆ ದೋಸ್ತಿ’ ಸಪ್ತಾಹದ ಕಾಲ ಪ್ರಚಾರದಲ್ಲಿ ಮಕ್ಕಳು ಸೋಮವಾರ ಸಹಾಯಕ ಪೊಲೀಸ್ ಅಯುಕ್ತ ಜಿ.ವಿ ಸುಬ್ರಹ್ಮಣ್ಯಂ ಅವರಿಗೆ ಸುರಕ್ಷಾ ಬಂಧನ ಕಟ್ಟುವ ಮೂಲಕ ಮಕ್ಕಳ ರಕ್ಷಣೆ ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆ ಕೂಡ ಜೊತೆ ಪರಸ್ಪರ ಸಂಬಂಧವನ್ನು ನಿರ್ವಹಿಸುತ್ತೇವೆ ಎಂದು ಈ ಸಂಧರ್ಭದಲ್ಲಿ ಬಲಪಡಿಸಿದ್ದರು.
ಚೈಲ್ಡ್‌ಲೈನ್ ಸೆ ದೋಸ್ತಿ ಸಪ್ತಾಹವು ನವೆಂಬರ್ 20 ರ ವರೆಗೆ ನಡೆಯಲಿದ್ದು ಸಮಾರೋಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕಸಬ ಬೆಂಗ್ರೆ ನಡೆಸಲಾಗುವುದು ಎಂದು ಚೈಲ್ಡ್‌ಲೈನ್ ಕೇಂದ್ರ ಸಂಯೋಜಕರಾದ ಶ್ರೀ. ಸಂಪತ್ ಕಟ್ಟಿ ತಿಳಿಸಿದರು.