ಕುಂದಾಪುರ:: ರಾಜ್ಯ ಎಯ್ಡ್ಸ್ ನಿಯಂತ್ರಣ ಸಂಘ ಮತ್ತು ಉಡುಪಿ ಜಿಲ್ಲಾ ಎಯ್ಡ್ಸ್ ನಿಯಂತ್ರಣ ಘಟಕದ ಪ್ರಾಯೋಜಕತ್ವದಲ್ಲಿ ಮರವಂತೆ ಸಾಧನಾ ಸಮುದಾಯ ಭವನದಲ್ಲಿ ಸಿದ್ಧಾಪುರದ ಶಂಭುಲಿಂಗೇಶ್ವರ ಯಕ್ಷನಾಟ್ಯ ಮೇಳದವರ ಯಕ್ಷಗಾನ ಪ್ರದರ್ಶನ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ. ಎ. ಸುಗುಣಾ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ ಗೌಡ, ಸಾಧನಾದ ಜಿ. ಎಸ್. ಮಡಿವಾಳ್, ಆರೋಗ್ಯ ಸಹಾಯಕರಾದ ದೀಪಾ, ಹುಲಿಯಪ್ಪ ಗೌಡ, ವಿನಯ್ ಇದ್ದರು.
ಕಲಾವಿದರಾದ ವಸಂತ ಹೆಗಡೆ, ಪ್ರಶಾಂತ ಹೆಗಡೆ, ಗಣಪತಿ ಎಸ್, ಮಹಾಬಲೇಶ್ವರ ಎಂ, ಮಹಾಬಲೇಶ್ವರ ಜಿ, ಪ್ರಸನ್ನ ಭಟ್ಟ, ವೆಂಕಟರಮಣ ಅವರು ನೀಡಿದ ಪ್ರದರ್ಶನ ಜನರಂಜನೆಯ ಜತೆಗೆ ಎಚ್‌ಐವಿ ಕುರಿತು ಜಾಗೃತಿ ಮೂಡಿಸುವಲ್ಲಿ ಹಾಗೂ ರಕ್ತದಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಯಶಸ್ವಿಯಾಯಿತು.