ಉಡುಪಿ: ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಇಲಾಖಾವತಿಯಿಂದ ವಿವಿಧ ಸವಲತ್ತು ವಿತರಣೆಯ ಯನ್ನು ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ರವರು ನೆರವೇರಿಸಿದರು.
ಮಣಿಪುರ ಗ್ರಾಮ ಪಂಚಾಯತ್ ಗೆ ತಮ್ಮ ಅವಧಿಯಲ್ಲಿ ಇದುವರೆವಿಗೂ 6.40 ಕೋಟಿ ಯ ಕಾಮಗಾರಿಗಳನ್ನು ಮಂಜೂರು ಮಾಡಿದ್ದು, ಸಂಪರ್ಕ ರಸ್ತೆ, ತಡೆಗೋಡೆ ನಿರ್ಮಾಣ, ಪಿಡಬ್ಲೂ ರಸ್ತೆ ಗಳ ಕಾಮಗಾರಿಗೆ ಆದ್ಯತೆ ನೀಡಿದ್ದು, 3.5 ಕೋಟಿ ವೆಚ್ಚದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆಗೆ ಮಂಜೂರಾತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಈ ಭಾಗದಲ್ಲಿ ರಸ್ತೆಗಳು ತುಂಬಾ ಕಿರಿದಾಗಿದ್ದು, ರಸ್ತೆಗಳ ಅಗಲೀಕರಣಕ್ಕಾಗಿ ಸಾರ್ವಜನಿಕರು ಸಹಕಾರ ನೀಡಿದಲ್ಲಿ ಎಲ್ಲಾ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು ಎಂದು ಹೇಳಿದರು.
ಈ ಭಾಗದಲ್ಲಿ ಮನೆ ನಿವೇಶನಕ್ಕಾಗಿ 1 ಎಕ್ರೆ 15 ಸೆಂಟ್ಸ್ ಜಾಗವನ್ನು ನಿಗದಿಪಡಿಸಲಾಗಿದೆ ಇಂದಿರಾ ಆವಾಸ್ ಯೋಜನೆಯಲ್ಲಿಯೂ ಸಹ ಮನೆ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ 50000 ಬಿ.ಪಿಎಲ್. ಕಾರ್ಡ್‌ಗಳನ್ನು ವಿತರಿಸಲಾಗಿದ್ದು, 4 ರಿಂದ 5 ಸಾವಿರ ಅರ್ಜಿಗಳು ಇನ್ನೂ ವಿತರಣೆಗೆ ಬಾಕಿ ಇದ್ದು, ಆದಷ್ಟು ಶೀಘ್ರದಲ್ಲಿ ಅವುಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಣಿಪುರ ಗ್ರಾಮ ಪಂಚಾಯತ್ ಅಧ್ಯಕ್ಷ ನಳಿನಿ, ಉಪಾಧ್ಯಕ್ಷೆ ಮೈಮುನಾ, ತಾ.ಪಂ. ಅಧ್ಯಕ್ಷರಾದ ಸುನೀತಾ ನಾಯಕ್, ಕಟಪಾಡಿ ಗ್ರಾ.ಪಂ. ಅಧ್ಯಕ್ಷ ವಿನಯ ಬಲ್ಲಾಳ್, ಜಿ.ಪಂ ಸದಸ್ಯೆ ಐಡಾ ಗಿಬ್ಬಾ ಡಿಸೋಜಾ, ತಾ.ಪಂ. ಉಪಾಧ್ಯಕ್ಷ ಗಣೇಶ್ ಕುಮಾರ್, ತಾ.ಪಂ. ಸದಸ್ಯ ಗುರುರಾಜ ಭಂಡಾರಿ, ತಹಸೀಲ್ದಾರ್ ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಸಚಿವರು ಸವಲತ್ತುಗಳನ್ನು ವಿತರಿಸಿದರು.
ಮಣಿಪುರ ಗ್ರಾ.ಪಂ. ಪಿಡಿಒ ಪ್ರವೀಣ್ ಸ್ವಾಗತಿಸಿದರು, ಪಂಚಾಯತ್ ಕಾರ್ಯದರ್ಶಿ ಚಂದ್ರಶೇಖರ್ ಸಾಲಿಯಾನ್ ವಂದಿಸಿದರು.