ಕುಂದಾಪುರ: ಕಳೆದ ನವೆಂಬರ 10ರಂದು ನಡೆದ ಮುದೂರು ಗ್ರಾಮದ ಮದ್ರಾಣಿಯ ರಘು ಪೂಜಾರಿ ಅವರ ಪುತ್ರಿ ಸುನೀತಾ(19) ಅವರ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಮುದೂರು ಗ್ರಾಮಸ್ಥರು ಕೊಲ್ಲೂರು ಠಾಣೆ ಎದುರು ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.
ಕುಗ್ರಾಮವಾದ ಮುದೂರಿನ ಅರಣ್ಯ ತಪ್ಪಲು ಪ್ರದೇಶದಲ್ಲಿ ವಾಸವಾಗಿರುವ ಯುವತಿಯ ಅನುಮಾನಸ್ಪದ ಸಾವಿನಿಂದಾಗಿ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ. ಇತ್ತೀಚೆಗೆ ರಾಜ್ಯದಾದ್ಯಂತ ಇಂತಹ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಮುದೂರಿನಂತಹ ಕುಗ್ರಾಮಗಳಲ್ಲೂ ನಡೆಯುತ್ತಿರುವುದರ ಬಗ್ಗೆ ಇಲ್ಲಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ನಿವಾಸಿಗಳು ಕಂಗೆಟ್ಟಿದ್ದಾರೆ. ಸುನೀತಾ ಮೃತಪಟ್ಟ ರಾತ್ರಿಯೇ ಆಕೆಯ ಮೊಬೈಲ್ ಪಕ್ಕದ ಮನೆಯ ಹತ್ತಿರ ಸಿಕ್ಕಿದೆ. ಅಲ್ಲದೇ ಅವಳ ಕುತ್ತಿಗೆಯ ಮೇಲೆ ಆಗಿರುವ ಏಟು ಹಾಗೂ ಒಂದು ಕಿವಿಯ ಓಲೆ ಇಲ್ಲದೇ ಇರುವುದರಿಂದ ಇದೊಂದು ಸಸಹಜ ಸಾವಿನ ಪ್ರಕರಣವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಸುನೀತಾ ಸಾವಿನ ಪ್ರಕರಣ ನಡೆದು ಎಂಟು ದಿನ ಕಳೆದಿದೆ. ಇದುವರೆಗೂ ಸೂಕ್ತ ತನಿಖೆ ನಡೆಸದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಡ ಕುಟುಂಬದ ಹೆಣ್ಣು ಮಗಳು ಅಸಹಜವಾಗಿ ಸಾವಿಗೀಡಾದರೂ ಕೂಲಂಕುಶ ತನಿಖೆ ನಡೆಸಿ ಆರೋಪಿಯನ್ನು ಬಂಧಿಸದೇ ಇರುವುದರಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಆತ್ಮಸ್ಥೈರ್ಯ ಕುಸಿಯುವಂತಾಗಿದೆ. ಇನ್ನೂ ಮೂರು ದಿನದೊಳಗೆ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದರೆ ನಾನಾ ಸಂಘ ಸಂಸ್ಥೆಗಳ ಹಾಗೂ ಮಹಿಳಾ ಸಂಘಟನೆಗಳ ನೇತತ್ವದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಬಳಿಕ ಬೈಂದೂರು ವತ್ತ ನಿರೀಕ್ಷಕ ಸುದರ್ಶನ್ ಅವರಿಗೆ ಮನಸಿ ಸಲ್ಲಿಸಲಾಯಿತು. ಶ್ರೀನಿವಾಸ್ ಆಚಾರ್, ಕಷ್ಣ ಆಚಾರ್, ನಾಗರಾಜ ಪೂಜಾರಿ, ಸಂತೋಷ ನಾಯ್ಕ, ಲಕ್ಷ್ಮಣ ಶೆಟ್ಟಿ ಪ್ರತಿಭಟನೆಯ ನೇತತ್ವ ವಹಿಸಿದ್ದರು.
ಮರಣೋತ್ತರ ವರದಿ ಬಳಿಕ ತನಿಖೆ
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮತ ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅವರ ವರದಿ ಇನ್ನೂ ನಮ್ಮ ಕೈ ಸೇರಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿನ ಸ್ಪಷ್ಟ ಕಾರಣ ತಿಳಿಯಲಿದ್ದು ಆ ಬಳಿಕ ಅಸಹಜ ಸಾವು ಎಂದು ಕಂಡುಬಂದಲ್ಲಿ ಸೂಕ್ತ ತನಿಖೆ ನಡೆಸಲಾಗುವುದು ಎಂದು ಬೈಂದೂರು ವತ್ತ ನಿರೀಕ್ಷಕ ಸುದರ್ಶನ್ ಎಂ. ಹೇಳಿದ್ದಾರೆ.