ಉಡುಪಿ: ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿಯನ್ನು ಬೆಳೆಸಲು, ಅರಿವು ಮೂಡಿಸಲು ಪ್ರಸಕ್ತ ಸಾಲಿನಲ್ಲಿ ಉಡುಪಿ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಪರಿಸರ-ಸ್ನೇಹಿ ಶಾಲಾ ಚಟುವಟಿಕೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು,ಪ್ರಥಮ ಬಹುಮಾನ 10,000 ರೂ. ನಗದು ಜೊತೆ ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲೆ ಪ್ರಮಾಣ ಪತ್ರ ಮತ್ತು ಪಾರಿತೋಷಕ ದ್ವಿತೀಯ ಬಹುಮಾನ ಹತ್ತು ಶಾಲೆಗಳಿಗೆ ತಲಾ ಎರಡು ಸಾವಿರ ರೂ. ಮತ್ತೆ ಹಸಿರು ಶಾಲೆ ಪ್ರಶಸ್ತಿ, ತೃತೀಯ ಬಹುಮಾನ ಹತ್ತು ಶಾಲೆಗಳಿಗೆ ತಲಾ ಒಂದು ಸಾವಿರ ರೂ. ಮತ್ತು ಹಳದಿ ಶಾಲೆ ಪ್ರಮಾಣ ಪತ್ರ ಮತ್ತು ಪಾರಿತೋಷಕ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಶಾಲೆಗಳಿಗೆ ಕಿತ್ತಲೆ ಶಾಲೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ್ ಪುರಾಣಿಕ್ ಹೇಳಿದರು.
ಮಂಡಳಿಯು ಜಿಲ್ಲೆಯ ಬ್ಲಾಕ್‌ಮಟ್ಟದಲ್ಲಿ ಬೈಂದೂರು, ಕುಂದಾಪುರ, ಬ್ರಹ್ಮಾವರ, ಕಾರ್ಕಳ, ಹಾಗೂ ಉಡುಪಿಯಲ್ಲಿ ಶಿಕ್ಷಕರಿಗೆ ತರಬೇತಿಯನ್ನು ಈ ಸಂಬಂಧ ಆಯೋಜಿಸಿದ್ದು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಪರಿಸರ ಮಿತ್ರ ಶಾಲೆಗಳನ್ನು ಆರಿಸಲಿದೆ ಎಂದರು.
ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಸ್ಪರ್ಧೆಯಲ್ಲಿ ಸ್ವ ಪ್ರೇರಿತರಾಗಿ ಭಾಗವಹಿಸುವಂತೆ ಕೋರಿ ಮಂಡಳಿಯಿಂದ ಆಹ್ವಾನ. ನೋಂದಾಯಿಸಿದ ಶಾಲಾ ಮುಖ್ಯೋಪಾಧ್ಯಾಯರಿಗೆ/ಶಿಕ್ಷಕರಿಗೆ ತರಬೇತಿ. ಪರಿಸರ ಸ್ನೇಹಿ ಶಾಲಾ ಚಟುವಟಿಕೆಗಳ ಸ್ವ ಮೌಲ್ಯಮಾಪನ ಪ್ರಶ್ನಾವಳಿ ವಿತರಣೆ.
ಜಿಲ್ಲೆಯಲ್ಲಿ ಒಟ್ಟು 30 ಶಾಲೆಗಳನ್ನು ಆರಿಸಲಾಗುವುದು. 30ಶಾಲೆಗಳಿಗೆ ತಜ್ಞರ ತಂಡ ಭೇಟಿ, ಶಾಲೆಗಳಲ್ಲಿ ಸ್ವ ಮೌಲ್ಯಮಾಪನದಲ್ಲಿ ತಿಳಿಸಿದ ಪರಿಸರ ಸ್ನೇಹಿ ವಿಷಯಗಳ ಅನುಷ್ಠಾನಗೊಂಡ ಕಾರ್ಯಕ್ರಮಗಳ ಪರಿಶೀಲನೆ. ಅವುಗಳಲ್ಲಿ 21 ಶಾಲೆಗಳ ಆಯ್ಕೆ.
ಈ ಸಂಬಂಧ ಸ್ವ ಮೌಲ್ಯಮಾಪನ ಮತ್ತು ಹಸಿರು ಶಾಲೆ ಆಯ್ಕೆ ಬಗ್ಗೆ ಶಿಕ್ಷಕರಿಗೆ ಸವಿವರ ಮಾಹಿತಿಯನ್ನು ಪಿಲಿಕುಳ ವಿಜ್ಞಾನ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ ಕೆ ವಿ ರಾವ್ ಅವರು ನೀಡಿದರು.
ಅರ್ಜಿಗಳನ್ನು ತುಂಬಿ ಸಲ್ಲಿಸಲು ಡಿಸೆಂಬರ್ 31 ಅಂತಿಮ ದಿನವಾಗಿದ್ದು, ಅರ್ಜಿಗಳನ್ನು ಪಿಲಿಕುಳಕ್ಕೆ ಸಲ್ಲಿಸಲು ಶಿಕ್ಷಕರಿಗೆ ಸೂಚಿಸಲಾಯಿತು. ಸಭೆಯಲ್ಲಿ ವಳಕಾಡು ಶಾಲೆ ಮುಖ್ಯೋಪಾಧ್ಯಾಯಿನಿ ನಿರ್ಮಲಾ, ಪ್ರಾಜೆಕ್ಟ್ ಕೋ ಆರ್ಡಿನೇಟರ್ ವಿವೇಕ್ ಗುನಗ ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ಸುಬ್ರಹ್ಮಣ್ಯ ವಂದಿಸಿದರು.