ಕನ್ನಡ ವಾರ್ತೆಗಳು

ಹಿರಿಯಡಕ : ಸಚಿವ ಸೊರಕೆ ಅವರಿಂದ ವಿವಿಧ ಸಲತ್ತು ವಿತರಣೆ

Pinterest LinkedIn Tumblr

ಉಡುಪಿ: ಕಳೆದ 1 ವರ್ಷ 5 ತಿಂಗಳ ಅವಧಿಯಲ್ಲಿ ಬೊಮ್ಮರಬೆಟ್ಟುಗಾಮಪಂಚಾಯತ್ ವ್ಯಾಪ್ತಿಯಲ್ಲಿನ ವಿವಿಧಕಾಮಗಾರಿಗೆ, ಇನ್ನಿತರ‌ ಅಭಿವೃದ್ಧಿ ಕೆಲಸಗಳಿಗಾಗಿ ಶಾಸಕರ ನಿಧಿ, ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 3.5 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ‌ಉಸ್ತುವಾರಿ ಸಚಿವ ವಿನಯ್‌ಕುಮಾರ್ ಸೊರಕೆ ಹೇಳಿದರು.

ಅವರು ಹಿರಿಯಡಕದ ಬೊಮ್ಮರಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಹಾಗು ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯ ವಿತರಣಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾನಾಡಿದರು.

hiriyadaka_Urbon_Minister

ತಹಶಿಲ್ದಾರ್ ಗುರುಪ್ರಸಾದ್, ಬೊಮ್ಮರಬೆಟ್ಟುಗ್ರಾಮಪಂಚಾಯತ್‌ಅಧ್ಯಕ್ಷ ಸುರೇಶ್ ನಾಯಕ್, ತಾಲ್ಲೂಕು ಪಂಚಾಯತ‌ಅಧ್ಯಕ್ಷೆ ಸುನಿತಾ ನಾಯ್ಕ್, ಉಪಾಧ್ಯಕ್ಷಗಣೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ‌ಇಲಾಖಾಧಿಕಾರಿ ಲೀಲಾವತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿರಾಜೇಂದ್ರ ಬೇಕಲ್, ಕಾಪು ಬ್ಲಾಕ್‌ಕಾಂಗ್ರೆಸ್ ಸಮಿತಿಯ‌ಅಧ್ಯಕ್ಷ ಸುಧೀರ್ ಹೆಗ್ಡೆ ಮತ್ತಿತರರು ಈ ಸಂದಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಚಿವರು 12 ಸಂಧ್ಯಾ ಸುರಕ್ಷಾ ವೇತನ, 2 ವಿಧವಾ ವೇತನ, 1 ಮನಸ್ವಿನಿ ಯೋಜನೆ, 170 ಬಿ.ಪಿ.ಎಲ್‌ಕಾರ್ಡ್, 27 ಅಂತ್ಯೋದಯಕಾರ್ಡ್, 71 ಅಂಗವಿಕಲ ವೇತನ ಸೇರಿದಂತೆ ವಿವಿಧ ಇಲಾಖೆಯಿಂದ ಮಂಜೂರಾದ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

ಹಿರಿಯಡಕದ ಜೋಡುಕಟ್ಟೆಯಿಂದ ಕೋಟ್ನಕಟ್ಟೆಯವರೆಗೆ ರಸ್ತೆಯ ಅಗಲೀಕರಣ ಮಾಡುವಂತೆ ಪಂಚಾಯತ್‌ನ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.

Write A Comment