ಉಡುಪಿ: ಸಾಲಿಗ್ರಾಮ, ಕಾರ್ಕಡ ಸಮೀಪದ ನೆಲ್ಲಿಬೆಟ್ಟುವಿನಲ್ಲಿ ಜಾರ್ಖಂಡ್ ಮೂಲದ ಹುಲ್ಮನಿ ಮಾರಾಂಡಿ (23)ಅನುಮಾನಸ್ಪದವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದ್ದು ಆಕೆಯ ಮ್ರತದೇಹವನ್ನು ಮಂಗಳವಾರ ತಡರಾತ್ರಿ ಹುಟ್ಟುರು ಜಾರ್ಖಂಡಿಗೆ ಓಯ್ದಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
ಸಾಲಿಗ್ರಾಮ ಸಮೀಪದ ಯಡಬೆಟ್ಟು ಗೋಪಾಲಕೃಷ್ಣ ದೇವಸ್ಥಾನ ರಸ್ತೆಯ ಮನೆಗೆ ಕಳೆದ ನಾಲ್ಕೈದು ದಿನಗಳ ಹಿಂದೆ ಹುಲ್ಮನಿ ಮಾರಂಡಿ ಕೆಲಸಕ್ಕೆ ಸೇರಿದ್ದು 2 ದಿನಗಳು ಮಾತ್ರ ಕೆಲಸ ಮಾಡಿದ್ದ ಆಕೆ ಶನಿವಾರ ಮಧ್ಯಾಹ್ನದಿಂದ ನಾಪತ್ತೆಯಾಗಿ ಬಳಿಕ ಭಾನುವಾರ ಸಂಜೆ ವೇಳೆಗೆ ಕಾರ್ಕಡ ಗ್ರಾಮದ ನಿರ್ಜನ ಪ್ರದೇಶದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ತೀರ ಬಡಕುಟುಂಬದವಳಾಗಿದ್ದ ಹುಲ್ಮನಿ ಮಾರಂಡಿ ವಿವಾಹಿತೆಯಾಗಿದ್ದು, ಗಂಡನನ್ನು ಕಳೆದುಕೊಂಡಿದ್ದಳೆಂಬ ಮಾಹಿತಿಯೂ ಇದೆ. ಕಷ್ಟದ ಸಲುವಾಗಿ ಈಕೆ ಸಾಲಿಗ್ರಾಮದ ಈ ಮನೆಗೆ ಕೆಲಸಕ್ಕಾಗಿ ಬಂದಿದ್ದಳೆನ್ನಲಾಗಿದೆ. ಮಂಗಳವಾರ ರಾತ್ರಿ ಉಡುಪಿಯ ಕುಂದಾಪುರಕ್ಕೆ ಆಗಮಿಸಿದ ಹುಲ್ಮನಿ ಅವರ ತಾಯಿ ಹಾಗೂ ಆಕೆಯ ಚಿಕ್ಕಪ್ಪನ ಮಗ ಮ್ರತದೇಹವನ್ನು ಪೊಲಿಸರ ಸಮ್ಮುಖದಲ್ಲಿ ಕುಂದಾಪುರ ಶವಾಗಾರದಿಂದ ಪಡೆದು ಬಳಿಕ ರಸ್ತೆ ಮಾರ್ಗವಾಗಿ ಝಾರ್ಖಂಡಿಗೆ ಕೊಂಡೊಯ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಕೆ ತಾಯಿ ನೀಡಿರುವ ಮಾಹಿತಿಯ ಪ್ರಕಾರ ಈಕೆ ಕೊಂಚ ಮಾನಸಿಕ ಅಸ್ವಸ್ಥೆಯಾಗಿದ್ದಳಂತೆ. ಮ್ರತದೇಹದ ಮರಣೋತ್ತಾರ ಪರೀಕ್ಷೆ ನಡೆಸಿದ್ದು ಬಳಿಕ ವಾರಿಸುದಾರರಿಗೆ ನೀಡಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.