ಮಂಗಳೂರು: ಇತ್ತೀಚೆಗೆ ನಾಪತ್ತೆಯಾಗಿದ್ದ ಬಸ್ ಕಂಡಕ್ಟರ್ ಮತ್ತು ಬಿಬಿಎಂ ವಿದ್ಯಾರ್ಥಿನಿ ವಿವಾಹವಾಗಿದ್ದು, ಪತ್ರಿಕಾ ಕಚೇರಿಗೆ ಪತ್ರವನ್ನು ಕಳುಹಿಸಿರುವ ಜೋಡಿ ತಮ್ಮನ್ನು ಬದು ಕಲು ಬಿಡಿ, ಹುಡುಕುವ ಪ್ರಯತ್ನ ಮಾಡಿದಲ್ಲಿ ಆತ್ಮಹತ್ಯೆ ಮಾಡುವುದಾಗಿ ಬರೆದಿದ್ದಾರೆ.
ನಗರದ ಕಾಲೇಜೊಂದರ ಬಿಬಿಎಂ ವಿದ್ಯಾರ್ಥಿನಿ ಕೋಟೆಕಾರು ನಿವಾಸಿ ಇನ್ಸಾ ಖಲೀಲ್(19) , ಮುಡಿಪು ಇರಾ ನಿವಾಸಿ ಬಸ್ ಕಂಡಕ್ಟರ್ ಭರತ್ ರಾಜ್ ಜತೆ ನ.19 ರಂದು ನಾಪತ್ತೆಯಾಗಿದ್ದರು. ಈ ಕುರಿತು ಮೊದಲು ಇನ್ಸಾ ಖಲೀಲ್ ನಾಪತ್ತೆ ಯಾಗಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ನಂತರ ಭರತ್ ರಾಜ್ ನಾಪತ್ತೆಯಾಗಿರುವ ಮಾಹಿತಿ ಪಡೆದ ಯುವತಿ ಹೆತ್ತವರು ಅಪಹರಣ ಪ್ರಕರಣ ದಾಖ ಲಿಸಿದ್ದರು.
ಇದೀಗ ಜೋಡಿ ವಿವಾಹವಾಗಿರುವ ಭಾವಚಿತ್ರ ದೊಂದಿಗೆ ಪತ್ರವನ್ನು ಪತ್ರಿಕಾ ಕಚೇರಿಗೆ ಕಳುಹಿಸಿದೆ. ಅದರಲ್ಲಿ ‘ನಮ್ಮ ಮದುವೆಗೆ ಯಾರೂ ಸಹಕರಿಸಿಲ್ಲ. ಆತನನ್ನು ತುಂಬಾ ಪ್ರೀತಿಸುತ್ತಿದ್ದರಿಂದ ಸ್ವ ಇಚ್ಛೆಯಿಂದ ತೆರಳಿ ವಿವಾಹವಾಗಿದ್ದೇನೆ. ಹುಡುಕುವ ಪ್ರಯತ್ನ ಮಾಡಬೇಡಿ. ಬದುಕಲು ಬಿಡಿ. ನಮ್ಮ ವಿಷಯದಲ್ಲಿ ಯಾರೂ ಗಲಾಟೆ ಮಾಡದಿರಿ, ನಮ್ಮಿ ಬ್ಬರನ್ನು ಬೇರ್ಪಡಿಸುವ ಪ್ರಯತ್ನ ಮಾಡಿದಲ್ಲಿ ಆತ್ಮಹತ್ಯೆ ಮಾಡುವುದಾಗಿ ತಿಳಿಸಿದ್ದಾರೆ.