ಬೆಂಗಳೂರು,ನ.26: ಮಹೇಶ್ ಬಾಬು, ಕೊರಟಾಲ ಶಿವು ಅವರ ಹೊಸ ಸಿನಿಮಾದ ಗೋವಾ ಶೆಡ್ಯೂಲ್ ನಿಲ್ಲಲು ಶ್ರುತಿ ಹಾಸನ್ ಕಾರಣ ಎನ್ನುವ ಸುದ್ದಿ ಈಗ ಟಾಲಿವುಡ್ ನಲ್ಲಿ ಹರಡಿದೆ. ಟಾಲಿವುಡ್ ಸೂಪರ್ ಸ್ಟಾರ್ ಮಹಶ್ ಬಾಬು ಅಭಿನಯದ ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸ ಬೇಕಿತ್ತು.
ಆದರೆ ಆಕೆ ಕೇವಲ ಶೂಟಿಂಗಿನಿಂದ ಮಾತ್ರವಲ್ಲ ಸಿನಿಮಾದಿಂದಲೇ ಹೊರ ಬಂದಿರುವ ಬಗ್ಗೆ ಸುದ್ದಿ ಹರಡಿದೆ. ಟಾಲಿವುಡ್ ಪಟ್ಟಣವಾಸಿಗಳು ಈ ಬಗ್ಗೆ ಸಾಕಷ್ಟು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಚಿತ್ರದಲ್ಲಿ ಶ್ರುತಿ ಬದಲಿಗೆ ಸಮಂತ ಆಯ್ಕೆಯಾಗಿದ್ದಾಳೆ.
ಮಹೇಶ್ ಬಾಬು ಹಾಗು ತಮಿಳಿನಲ್ಲಿ ವಿಜಯ್ ಜೊತೆ ನಟಿಸುತ್ತಿರುವ ಶ್ರುತಿಗೆ ಮಹೇಶ್ ಚಿತ್ರಕ್ಕೆ ಸಮಯ ಹೊಂದಿಸಲಾಗದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಸದಾ ಇಂತಹ ಗೊಂದಲ ಬೇಡವೆಂದು ನಿರ್ಧರಿಸಿ ಮಹೇಶ್ ಬಾಬು ತನ್ನ ಆದ್ಯತೆಯನ್ನು ಸಮಂತಳಿಗೆ ನೀಡಿದ್ದಾರೆ.
ವಾರ ನಡೆದ ಈ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲು ಚೆನ್ನೈ ನಿಂದ ಹೊರಟ ಶ್ರುತಿ ಸಮಯಕ್ಕೆ ಸರಿಯಾಗಿ ಹೋಗಲಾಗದೆ ಫ್ಲೈಟ್ ಮಿಸ್ ಮಾಡಿಕೊಂಡಳು. ಈ ಪ್ರಕರಣ ಒಂದೆರಡು ಸರ್ತಿ ಪುನರಾವರ್ತನೆ ಆದ ಕಾರಣ ಶ್ರುತಿಗೂ ತಮಗೂ ಸರಿ ಹೊಂದಲ್ಲ ಎಂದು ನಿರ್ಧರಿಸಿ ಮಹೇಶ್ ಬಾಬು ಈ ನಿರ್ಧಾರಕ್ಕೆ ಬಂದರಂತೆ. ಒಟ್ಟಾರೆ ಸೋಲಿನ ಸುಳಿಯಲ್ಲಿ ಇರುವ ಮಹೇಶ್ ಬಾಬು ಅವರ ಅದೃಷ್ಟ ಸಮಂತ ಬದಲಾಯಿಸುತ್ತಾಳ? ಸಮಯವೇ ಎಲ್ಲ ಹೇಳುತ್ತದೆ.