ಕನ್ನಡ ವಾರ್ತೆಗಳು

ಭಾರತೀಯ ಯುವಕರಿಗೆ ಭಯೋತ್ಪಾದಕ ಸಂಘಟನೆ ತ್ಯಜಿಸಿ ಮರಳಿ ಗೂಡಿಗೆ ಸೇರಲು ಇಚ್ಚೆ

Pinterest LinkedIn Tumblr

terriest_photo_mumbai

ಮುಂಬೈ,ನ.26 : ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ಸ್ ಸೇರಿಕೊಂಡಿರುವ ಮುಂಬೈ ಸಮೀಪದ ಕಲ್ಯಾಣ್ ಮೂಲದ ನಾಲ್ವರು ಭಾರತೀಯ ಯುವಕರು ಮನೆಗೆ ಮರಳಲು ಬಯಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬುಧವಾರ ಪ್ರಕಟವಾಗಿರುವ ಮಾಧ್ಯಮಗಳ ವರದಿಯ ಪ್ರಕಾರ, ಮನೆ ತೊರೆದು ಹೋಗಿ ಉಗ್ರ ಸಂಘಟನೆಯ ಸದಸ್ಯರಾಗಿ ಗುರುತಿಸಿಕೊಂಡಿರುವ ನಾಲ್ಕು ಜನ ಯುವಕರ ಕುಟುಂಬದ ಸದಸ್ಯರು ಸರ್ಕಾರವನ್ನು ಸಂಪರ್ಕಿಸಿ ತಮ್ಮ ಮಕ್ಕಳಿಗೆ ತಪ್ಪಿನ ಅರಿವಾಗಿದೆ. ಅವರು ಭಯೋತ್ಪಾದಕ ಸಂಘಟನೆಯನ್ನು ತ್ಯಜಿಸಿ ದೇಶಕ್ಕೆ ಮರಳಿ ಹೊಸ ಬದುಕು ಪ್ರಾರಂಭಿಸುವ ಮನೋಭಿಲಾಷೆ ಹೊಂದಿದ್ದಾರೆ ಎಂದು ಹೇಳಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರಲ್ಲೊಬ್ಬ ಯುವಕನೊಬ್ಬನ ತಂದೆ “ನನ್ನ ಮಗ ಹಿಂತಿರುಗ ಬಯಸುತ್ತಿದ್ದಾನೆ. ಆದರೆ ಅದಕ್ಕೆ ಸರಕಾರದ ಸಹಾಯ ಹಸ್ತ ಅತ್ಯವಶ್ಯ ” ಎಂದು ಹೇಳಿದ್ದಾರೆ.

ಇವರನ್ನು ಹೊರತು ಪಡಿಸಿ ಇರಾಕ್‌ನಲ್ಲಿ ಇದೇ ಭಯೋತ್ಪಾದಕ ಸಂಘಟನೆಗಾಗಿ ಧರ್ಮಯುದ್ಧದಲ್ಲಿ ತೊಡಗಿಸಿಕೊಂಡಿರುವ ಮತ್ತೆ ಮೂವರು ಯುವಕರು ಸಹ ದೇಶಕ್ಕೆ ಮರಳ ಬಯಸುತ್ತಿದ್ದಾರೆ ಎಂಬ ಮಾಹಿತಿ ಸರಕಾರದ ಬಳಿ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

Write A Comment