ಪಾಟ್ನಾ ,ನ 28: ಸ್ಮಶಾನದಲ್ಲಿ ಹೂತಿಟ್ಟಿದ್ದ ಶವಗಳನ್ನು ಸಹ ಬಿಡುತ್ತಿಲ್ಲ ಇಂದಿನ ಕಳ್ಳರು. ಹೌದು. ಇದು ನಡೆದದ್ದು ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ.ಇಲ್ಲಿನ ಒಂದು ಸ್ಮಶಾನದಿಂದ ಕಳೆದ ಕೆಲ ದಿನಗಳಲ್ಲಿ 5 ಶವಗಳನ್ನ ಕದ್ದೊಯ್ಯಲಾಗಿದೆ. ಸಮಾಧಿಗಳನ್ನು ಕೆಡವಿ ಶವಗಳನ್ನ ಹೊತ್ತೊಯ್ಯಲಾಗಿದೆ. ಶವವನ್ನು ಹುಗಿದ ಜಾಗದಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಶವ ಮಾತ್ರ ಕಾಣುತ್ತಿಲ್ಲ.
ಕಳ್ಳಸಾಗಣೆಗಾರರು ಈ ಕೃತ್ಯವನ್ನು ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತೀವೃ ಹುಡುಕಾಟ ನಡೆಸಿದ್ದಾರೆ. ಸ್ಮಗ್ಲರ್‌ಗಳು ಮಾನವನ ದೇಹದ ಮೂಳೆಗಳನ್ನ ಪಶ್ಚಿಮಬಂಗಾಳ ಮತ್ತು ನೆರೆಯ ನೇಪಾಳ ದೇಶಕ್ಕೆ ರವಾನಿಸಿ ಹಣ ಸಂಪಾದಿಸುತ್ತಾರೆ ಎಂದು ಹೇಳಲಾಗಿದೆ.