ಕನ್ನಡ ವಾರ್ತೆಗಳು

ವಾಕಿಂಗ್ ಮೊಬೈಲ್ ಚಾರ್ಜರ್ : ಎಮ್.ಐ.ಟಿ ಹೊಸ ಸಂಶೋಧನೆ

Pinterest LinkedIn Tumblr

mit_walking_mobali_charger

ನವದೆಹಲಿ,ನ.28: ವಾಕಿಂಗ್ ಮೊಬೈಲ್ ಚಾರ್ಜರ್ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀರಾ? ಇಲ್ಲಿದೆ ನಿಮಗೊಂದು ಶುಭ ಸುದ್ದಿ. ಪಾರ್ಕಿಂಗ್‌ನಲ್ಲಿ ವಾಕ್ ಮಾಡುತ್ತಾ ನಿಮ್ಮ ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಬಹುದಂತೆ.

ಮಸ್ಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಸಂಸ್ಥೆಯ ಸಂಶೋಧಕರು ಹೊಸತೊಂದು ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ನಿಮ್ಮ ಜೇಬಿನಲ್ಲಿರುವ ಎಲೆಕ್ಟ್ರಾನಿಕ್‌ ವಸ್ತುಗಳಾದ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ನಂತಹ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಮನುಷ್ಯರ ಚಲನೆಯನ್ನು ವಿದ್ಯುತ್‌ನಂತೆ ಪರಿವರ್ತಿಸುವ ಎರಡು ಸೆಂಟಿಮೀಟರ್‌ ಅಗಲದ ಬ್ಯಾಟರಿಯನ್ನು ಸಂಶೋದಿಸಿದ್ದಾರೆ

ಅಭಿವೃದ್ಧಿಪಡಿಸಿದ ಬ್ಯಾಟರಿ ಥರ್ಮಲಿ ರಿಜನರೇಟಿವ್ ಎಲೆಕ್ಟ್ರೋಕೆಮಿಕಲ್ ಸೈಕಲ್ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಮನುಷ್ಯರ ದೇಹದಲ್ಲಿರುವ ಶಾಖವನ್ನು ವಿದ್ಯುತ್‌ನ್ನಾಗಿ ಪರಿವರ್ತಿಸಿ ಮೊಬೈಲ್ ಬ್ಯಾಟರಿ ಚಾರ್ಜ್ ಆಗಲು ನೆರವಾಗುತ್ತದೆ.

Write A Comment