ಕನ್ನಡ ವಾರ್ತೆಗಳು

ಆಕ್ಷನ್ ಜಾಕ್ಸನ್ ಹೀರೋ ಅಜಯ್ ದೇವಗನ್ ಗೆ ದಕ್ಷಿಣ ಕೊರಿಯಾ ದೇಶದ ಪ್ರತಿಷ್ಠಿತ ಬ್ಲಾಕ್ ಬೆಲ್ಟ್ ಪ್ರದಾನ.

Pinterest LinkedIn Tumblr

ajay_devagan_black_belt

ಮುಂಬಯಿ,ನ.28: ಪ್ರಸ್ತುತ ಆಕ್ಷನ್ ಜಾಕ್ಸನ್ ಎನ್ನುವ ಚಿತ್ರದಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಅವರ ಆಕ್ಷನ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ ಪ್ರಭುದೇವ. ಬಾಲಿವುಡ್ ನಲ್ಲಿ ವೀರು ದೇವಗನ್ ಎನ್ನುವ ಆಕ್ಷನ್ ಡೈರೆಕ್ಟರ್ ಅವರ ಪುತ್ರ ಆಗಿರುವ ಅಜಯ್ ಗೆ ಸಾಹಸ ಹೊಸದಲ್ಲ. ಆದರೆ ಅವರು ಕೇವಲ ಸ್ಟಂಟ್ ಮಾಸ್ಟರ್ ಆಗದೆ ನಟನೆಗೆ ಆದ್ಯತೆ ನೀಡಿ, ಪ್ರಸಿದ್ಧ ನಟಿ ಕಾಜೋಲ್ ಜೊತೆ ಮದುವೆಯಾಗಿ ಈಗ ಎರಡು ಮಕ್ಕಳ ತಂದೆ. ಇದು ಅವರ ಫ್ಯಾಮಿಲಿ ಮ್ಯಾಟರ್

ಈಗ ಅವರ ಬಗ್ಗೆ ಹೇಳುವ ಸಂಗತಿ ಒಂದಿದೆ. ದಕ್ಷಿಣ ಕೊರಿಯಾ ದೇಶದವರು ಅಜಯ್ ಗೆ ವಿಶೇಷ ಪ್ರಶಸ್ತಿ, ಗೌರವ ನೀಡಿ ಗೌರವಿಸಿದ್ದಾರೆ. ಅಂದರೆ ಅಜಯ್‌ಗೆ ದಕ್ಷಿಣ ಕೊರಿಯಾ ದೇಶದ ಪ್ರತಿಷ್ಠಿತ ಬ್ಲಾಕ್ ಬೆಲ್ಟ್ ದೊರೆತಿದೆ. ಅವರ ಆಕ್ಷನ್ ಜಾಕ್ಸನ್ ಚಿತ್ರದ ಕೆಲವು ಸಾಹಸ ದೃಶ್ಯಗಳನ್ನು ಅವರು ವರ್ಲ್ಡ್ ಆಫ್ ಟೆಕ್ ವಾಂಡೋ ಪ್ರಧಾನ ಕಚೇರಿಗೆ ಕಳುಹಿಸಿದ್ದರು. ಅಲ್ಲಿನ ತಜ್ಞರ ತಂದ ಈ ದೃಶ್ಯಗಳನ್ನು ಗಮನಿಸಿ ಅಜಯ್ ಅವರಿಗೆ ಸೌತ್ ಕೊರಿಯಾದ ಟೆಕ್ ವಾಂಡೋ ಮಾಸ್ಟರ್ಸ್ ಡ್ಯಾನ್ ಬ್ಲಾಕ್ ಬೆಲ್ಟ್ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯನ್ನು ಅಲ್ಲಿನ ಪ್ರಮುಖ ಮಾಸ್ಟರ್ ಗಳು ಭಾರತಕ್ಕೆ ಬಂದು ಪ್ರದಾನ ಮಾಡಲಿದ್ದಾರೆ. ಕಲೆಗೆ ಗಡಿಯ ಮಿತಿ ಇಲ್ಲ ಎನ್ನುವುದಕ್ಕೆ ಇದು ಒಂದು ಉತ್ತಮ ಸಾಕ್ಷಿ.

Write A Comment