ಮುಂಬೈ,ಡಿ.01 ರಿಯಾಲಿಟಿ ಷೋನಲ್ಲಿ ಯುವಕನೊಬ್ಬ ಅವರು ತುಂಡುಡುಗೆ ತೊಟ್ಟು ಡ್ಯಾನ್ಸ್ ಮಾಡುತ್ತಿದ್ದ ಗೌಹರ್ ಖಾನ್ ಅವರನ್ನು ಕಂಡು ಕೆರಳಿ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ರಾ ಸ್ಟಾರ್ ಟಿವಿ ರಿಯಾಲಿಟಿ ಷೋನಲ್ಲಿ ಈ ಘಟನೆ ನಡೆದಿದೆ. ಮಂಬೈನ ಫಿಲ್ಮ್ ಸಿಟಿಯಲ್ಲಿ ರಾ ಸ್ಟಾರ್ ಷೂಟಿಂಗ್ ನಡೆಯುತ್ತಿತ್ತು.
ರಿಯಾಲಿಟಿ ಷೋ ಆಂಕರ್ ಆಗಿದ್ದ ಗೌಹಾರ್ ಖಾನ್ ದೇಹದ ಮೈಮಾಟ ಪ್ರದರ್ಶನ ಮಾಡುವ ಬಟ್ಟೆ ತೊಟ್ಟಿದ್ದನ್ನು ಕಂಡು ಮಹಮಮದ್ ಅಕೀಲ್ ಮಲ್ಲಿಕ್ ಕೆರಳಿದ. ವೇದಿಕೆ ಬಳಿಗೆ ತೆರಳಿ ನೀನು ಇಂಥಹ ತುಂಡುಡುಗೆ ತೊಡುವುದು ಸರಿಯಲ್ಲ. ಇದು ನಮ್ಮ ಧರ್ಮಕ್ಕೆ ಅಪಮಾನ ಎಂದು ಹೇಳುತ್ತಾನೆ. ಆಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ.
ಕೋಪಗೊಂಡ ಮಹಮದ್ ದಿಢೀರನೇ ಗೌಹರ್ ಖಾನ್ ಕೆನ್ನೆಗೆ ಪಟೀರನೇ ಬಾರಿಸುತ್ತಾನೆ. ಗಾರ್ಡ್‌ಗಳು ಕೂಡಲೇ ಯುವಕನನ್ನು ಹಿಡಿದು ಏರೀ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಜನರೂ ಕೂಡ ಮಹಮದ್ ಅಕೀಲ್ ಮಲ್ಲಿಕ‌್‌ಗೆ ಥಳಿಸಿದರು. ಕಳೆದ ಮೂರು ದಿನಗಳಿಂದ ಮಹಮದ್ ಶೂಟಿಂಗ್ ಸೆಟ್‌ಗೆ ಬರುತ್ತಿದ್ದ. ಗೌಹರ್ ಖಾನ್ ನೀಡಿದ ಲೈಂಗಿಕ ಕಿರುಕುಳದ ದೂರಿನಲ್ಲಿ ಅವನು ನನ್ನನ್ನು ಮುಟ್ಟಲು ಬಂದಾಗ ನಾನು ಆಕ್ಷೇಪಿಸಿದ್ದರಿಂದ ಕೆನ್ನೆಗೆ ಬಾರಿಸಿದ ಎಂದು ಹೇಳಿದ್ದಾರೆ.