ಕನ್ನಡ ವಾರ್ತೆಗಳು

ಹೆಚ್.ಐ.ವಿ ನಿಯಂತ್ರಣಕ್ಕೆ ಯುವಜನತೆ ಮುಂದಾಗಬೇಕು-ಉಮಾ ಎಂ.ಜಿ.

Pinterest LinkedIn Tumblr

Aloysius_aids_prgrams_1

ಮಂಗಳೂರು, ಡಿ.01: ಏಡ್ಸ್ ನಮ್ಮ ಸಮಾಜಕ್ಕೊಂದು ದೊಡ್ಡ ಕಳಂಕವಾಗಿದೆ ಇದರಿಂದ ದೇಶದ ಪ್ರಗತಿಗೆ ಮಾರಕವಾಗಿದೆ, ಯುವಜನತೆ ಜೀವನರೀತಿಯನ್ನು ಬದಲಿಸಿಕೊಳ್ಳದ ಹೊರತು ಮಾರಕ ರೋಗಗಳಿಗೆ ತುತ್ತಾಗುವುದು ನಿಶ್ಚಿತ, ಆದ್ದರಿಂದ ಯುವಜನತೆ ಹೆಚ್.ಐ.ವಿ / ಏಡ್ಸ್ ನಿಯಂತ್ರಣಕ್ಕೆ ಮುಂದಾಗುವ ದಿಕ್ಕಿನಲ್ಲಿ ಸಂಯಮದ ಬದುಕನ್ನು ರೂಪಿಸಿಕೊಳ್ಳುವಂತೆ ಜಿಲ್ಲಾ ಸತ್ರ ನ್ಯಾಯಾಧೀಶರಾದ ಉಮಾ ಎಂ.ಜಿ ಅವರು ತಿಳಿಸಿದ್ದಾರೆ.

Aloysius_aids_prgrams_3 Aloysius_aids_prgrams_2

ಅವರು ಸೋಮವಾರ ನಗರದ ಸಂತ ಅಲೋಷಿಯಸ್ ಪದವಿ ಕಾಲೇಜು ಮಂಗಳೂರು ಇಲ್ಲಿಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿ‌ಐಂತ್ರಣ ಘಟಕ, ಮಂಗಳೂರು ವಿ.ವಿ. ವ್ಯಾಪ್ತಿಯ ಕಾಲೇಜುಗಳ ಎನ್.ಎಸ್.ಎಸ್. ಘಟಕಗಳ ರೆಡ್ ರಿಬ್ಬನ್ ಕ್ಲಬ್‌ಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ ಜಿಲ್ಲಾ ವಕೀಲರ ಸಂಘ ಹಾಗೂ ಸಂತ ಅಲೋಷಿಯಸ್ ಪದವಿ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನ 2014  ನ್ನು ಉದ್ಗಾಟಿಸಿ ಮಾತನಾಡಿದರು. ಯುವಕರು ಸ್ವೇಚ್ಚಾಚಾರ ಜೀವನಕ್ಕಿಂತ ಶಿಸ್ತು ಸಂಯಮದ ಜೀವನ ಕ್ರಮವನ್ನು ಅನುಸರಿಸುವುದರಿಂದ ಏಡ್ಸ್‌ನಂತ ಕಾಯಿಲೆಗಳನ್ನ ತಡೆಯಲು ಸಾಧ್ಯ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಮಾತನಾಡಿ, ಏಡ್ಸ್ – ಹೆಚ್ ಐ.ವಿ ಯನ್ನು ನಿಯಂತ್ರಣಕ್ಕೆ ತರುವಲ್ಲಿ ಸ್ವಯಂಸೇವಾ ಸಂಸ್ಥೆಗಳು ಸರ್ಕಾರದೊಣದಿಗೆ ಸೇರಿ ಉತ್ತಮ ಕಾರ್ಯ ಮಾಡುತ್ತಿರುವುದರಿಂದ ಇಂದು ದೇಶದಲ್ಲಿ ಕಳೇದ ಹತ್ತು ವರ್ಷಗಳಲ್ಲಿ ಏಡ್ಸ್ – ಹೆಚ್.ಐ.ವಿ. ನಿಯಂತ್ರಣಕ್ಕೆ ಬರುತ್ತಿರುವ ವರದಿಗಳನ್ನು ನಾವು ನೋಡುತ್ತಿದ್ದೇವೆ. ನಮ್ಮ ದೇಶ ಏಡ್ಸ್ ಮುಕ್ತವಾಗಬೇಕು ನಮ್ಮ ಯುವಜನತೆ ಆರೋಗ್ಯ ಪೂರ್ಣರಾಬೇಕು ಆದ್ದರಿಂದ ನಾವು ಏಡ್ಸ್ ಬಗ್ಗೆ ಜನರಲ್ಲಿ ಜಾಗೃತಿ ಉಂಟುಮಾಡಬೇಕು, ನಾವು ನಮ್ಮ ಸುತ್ತಲಿರುವವರಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸಬೇಕಲ್ಲದೆ ಎಡ್ಸ್ ಪೀಡಿತರನ್ನ ಪ್ರೀತಿ ವಶ್ವಾಸಗಳಿಂದ ಕಾಣಬೇಕು, ಅವರೊಂದಿಗೆ ಸಾಮಾನ್ಯವಾಗಿ ವರ್ತಿಸಬೇಕು ಅವರಿಗೆ ನೋವುಂಟಾಗದಂತೆ ಮಾನವೀಯತೆಯಿಂದ ಅವರನ್ನ ಕಾಣಬೇಕೆಂದು ಜಿಲ್ಲಾಧಿಕಾರಿಗಳು ಯುವಜನತೆಗೆ ಕರೆಯಿತ್ತಿರು.

Aloysius_aids_prgrams_5 Aloysius_aids_prgrams_4

ದ,ಕಜಿಲ್ಲೆಯಲ್ಲಿ 2006  ರಿಂದ ಅಕ್ಟೋಬರ್ 2014 ರವರೆಗೆ1443  ಪುರುಷರು,1081  ಮಹಿಳೆಯರು ಹಾಗೂ 287  ಮಕ್ಕಳು(15  ವರ್ಷಕ್ಕಿಂತ ಕೆಳಗಿನವರು) ಏ ಆರ್ ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ದಿನ 6೦೦೦ ಯುವಕರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇವರಲ್ಲಿ ಶೇ.35 % ಏಡ್ಸ್ ಪ್ರಕರಣಗಳು ವರದಿಯಾಗುತ್ತಿರುವುದು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಎಂಬುದು ಆತಂಕಕಾರಿಯಾಗಿದೆ. ಸಭೆಯಲ್ಲಿ ಹಾಜರಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಪಿ.ಚೆಂಗಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಣೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ರಾಮಕೃಷ್ಣ ರಾವ್,ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ|ಕಿಶೋರ್ ಕುಮಾರ್ ಮುಂತಾದವರು ಹಾಜರಿದ್ದರು. ಸಂತ ಅಲೋಷಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಸ್ವೀಬರ್ಟ್ ಡಿ ಸಿಲ್ವಾ ಎಸ್.ಜೆ. ಇವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರೋ|ವಿನೀತ ಪ್ರಮಾಣ ವಚನ ಬೊದಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ವಂದಿಸಿದರು.

Write A Comment