ಕನ್ನಡ ವಾರ್ತೆಗಳು

ಡಿ. 7; ಶ್ರೀ ಬಾರ್ಕೂರು ಮಹಾಸಂಸ್ಥಾನದ ಸ್ಥಾಪನಾರ್ಥ ಭೂಮಿಪೂಜೆ

Pinterest LinkedIn Tumblr

ಉಡುಪಿ : ತುಳುನಾಡಿನ ರಾಜಧಾನಿಯೆಂದೇ ದಾಖಲಿಸ್ಪಟ್ಟಿರುವ ಶ್ರೀ ಬಾರ್ಕೂರು ಮಹಾಸಂಸ್ಥಾನವು ಬಂಟ ಸಮುದಾಯದ ಮೂಲಸ್ಥಾನವಾಗಿತ್ತು. ಈಗ ಮತ್ತೂಮ್ಮೆ ಬಂಟ ಸಮುದಾಯದ ನೇತೃತ್ವದಲ್ಲಿ ಎಲ್ಲ ಸಮುದಾಯಗಳನ್ನು ಕೂಡ ಜತೆಯಾಗಿರಿಸಿಕೊಂಡು ಸಂಸ್ಥಾನವನ್ನು ಸ್ಥಾಪಿಸಿ ಸಂಸ್ಥಾನದ ಮೂಲಕ ಧಾರ್ಮಿಕ, ಸಾಮಾಜಿಕ, ವೈದ್ಯಕೀಯ , ಶೈಕ್ಷಣಿಕ ಸೇವೆಗಳನ್ನು ನೀಡುವ ಮಹತ್ವದ ಸಂಕಲ್ಪ ಮಾಡಲಾಗಿದೆ. ಶ್ರೀ ಬಾರ್ಕೂರು ಮಹಾಸಂಸ್ಥಾನದ ಸ್ಥಾಪನಾರ್ಥ ಭೂಮಿಪೂಜೆ ಡಿ. 7ರಂದು ಬೆಳಗ್ಗೆ 10.30ಕ್ಕೆ ಬಾರ್ಕೂರು ಭಾರ್ಗವಬೀಡಿನಲ್ಲಿ ನೆರವೇರಲಿದೆ ಎಂದು ಸಂಸ್ಥಾನದ ನಿಯೋಜಿತ ಅಧ್ಯಕ್ಷ ಹಾಗೂ್ ಬಾರ್ಕೂರು ಸಂಸ್ಥಾನ ಟ್ರಸ್ಟ್‌ ಅಧ್ಯಕ್ಷ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತೀ ಶ್ರೀ ಹೇಳೀದ್ದಾರೆ.

Dr.Santhosh_Gurooji
ಭೂತಾರಾಧನೆ, ಅಳಿಯಕಟ್ಟು ಪರಂಪರೆ ಆರಂಭವಾಗಿರುವ ಬಾರ್ಕೂರು ಸಂಸ್ಥಾನ ಅಳಿದು ಸಾವಿರಾರು ವರ್ಷಗಳೇ ಕಳೆದರೂ ಕುಂಡೋದರನ ಗುಡಿ, ದೈವದ ಕುಲ, ಕಟ್ಟಳೆಗಳು ಇನ್ನೂ ಜೀವಂತವಾಗಿವೆ. 250 ದೈವಗಳನ್ನು ಪ್ರತಿಷ್ಠಾಪಿಸಿ ಪುಣ್ಯ ಆರಾಧನಾ ಸ್ಥಳವನ್ನಾಗಿಸಿ ಹಳೆಯ ವೈಭವ ಮರುಕಳಿಸುವಂತಾಗಲು, ಬಂಟ ಸಮುದಾಯ ಒಂದಾಗಿ ಸಮುದಾಯ ಹಾಗೂ ಸಮಸ್ತ ಸಮಾಜದ ಏಳಿಗೆಗೆ ವಿವಿಧ ರೀತಿಯ ಸೇವಾ ಕಾರ್ಯಗಳನ್ನು ನಡೆಸುವಂತಾಗಲು ಈ ಮಹಾಸಂಸ್ಥಾನ ಪೂರಕವಾಗಲಿದೆ. ಇದರ ಸೇವಾ ಕಾರ್ಯಗಳಿಗಾಗಿ ಟ್ರಸ್ಟ್‌ ರಚಿಸಲಾಗಿದ್ದು ಟ್ರಸ್ಟಿಗಳು ಸೇರಿದಂತೆ 250 ಮಂದಿ ಈ ಸಮಿತಿಯಲ್ಲಿದ್ದಾರೆ. ಎಲ್ಲರನ್ನು ಜತೆಯಲ್ಲಿ ಸೇರಿಸಿಕೊಂಡು ಎಲ್ಲ ಸಮುದಾಯದವರಿಗೂ ಸಂಬಂಧಪಡುವ ಸಂಸ್ಥಾನವನ್ನಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಟ್ರಸ್ಟಿ ಅಮೃತಾ ಎಸ್‌. ಶೆಟ್ಟಿ, ಕೆ. ಗೋಪಾಲ ಕೃಷ್ಣ ಶೆಟ್ಟಿ, ರವೀಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Write A Comment