ಮಂಗಳೂರು, ಡಿ.03 : ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟ (ಫೆಡರೇಶನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಶನ್ಸ್)ದಿಂದ ನೀಡಲಾಗುವ 2014ನೆ ಸಾಲಿನ ಪ್ರತಿಷ್ಠಿತ ‘ನಿರ್ಯಾತ್ ಶ್ರೀ ಗೋಲ್ಡ್ ಪ್ರಶಸಿ’್ತಗೆ ಪಾತ್ರವಾಗಿದೆ.
ರಫ್ತು-ಕ್ಷೇತ್ರದಲ್ಲಿ ಮಾಡಿರುವ ಅತ್ಯುತ್ತಮ ಸಾಧನೆೆಗಾಗಿ ಕಂಪೆನಿಯು ಈ ಪ್ರಶಸ್ತಿಯನ್ನು ಗಳಿಸಿದೆ. ಡಿಸೆಂಬರ್ 1ರಂದು ಹೊಸದಿಲ್ಲಿಯ ವಿಜ್ಞಾನ ಭವನ ದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ಕಂಪೆನಿಯ ಆಡಳಿತ ನಿರ್ದೇಶಕ ಕೆ.ಮುಹಮ್ಮದ್ ಹಾರಿಸ್ ಟ್ರೋಫಿಯನ್ನೊಳಗೊಂಡ ಪ್ರಶಸ್ತಿಯನ್ನು ಸ್ವೀಕರಿಸಿದರು. ಜವಳಿ ಖಾತೆಯ ಸಹಾಯಕ (ಸ್ವತಂತ್ರ ಖಾತೆ) ಸಚಿವರಾದ ಸಂತೋಷ್‌ಕುಮಾರ್ ಗಂಗ್ವಾರ್, ವಾಣಿಜ್ಯ ಕಾರ್ಯದರ್ಶಿ ರಾಜೀವ್ ಖೇರ್, ಡಿಜಿಎಫ್‌ಟಿಯ ಪ್ರವೀಣ್‌ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.